ಉ.ಕ ಸುದ್ದಿಜಾಲ ಬಾಗಲಕೋಟೆ :

ಅನುದಾನದ ಕೊರತೆಯಿಂದ ರಾಜ್ಯದಲ್ಲಿನ ಕೆಲವು ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ಸರ್ಕಾರ. ಸರ್ಕಾರಕ್ಕೆ ಕೌಂಟರ್ ಕೊಟ್ಟ ಸ್ವಾಮೀಜಿ, ಸರ್ಕಾರದಲ್ಲಿ ಅನುದಾನದ‌ ಕೊರತೆ ಇದ್ದರೆ ಹೇಳಿ ಜೋಳಿಗೆ ಹಾಕಿ ಭಿಕ್ಷೆ ಬೇಡುವೆ ಎಂದು ಜಮಖಂಡಿಯ ಪ್ರಖ್ಯಾತ ಓಲೆ ಮಠದ ಶ್ರೀ ಆನಂದ ದೇವರು ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಮಾತನಾಡಿದ ಸ್ವಾಮೀಜಿ ಜಮಖಂಡಿಯಲ್ಲಿರುವ ಬಾಗಲಕೋಟೆ ವಿಶ್ಚವಿದ್ಯಾಲಯ ರದ್ದು ಮಾಡಲು ಹೊರಟಿರುವ ಸರ್ಕಾರಕ್ಕೆ ಕೌಂಟರ್ ನೀಡಿದ್ದಾರೆ. ಸರ್ಕಾರದಲ್ಲಿ ಅನುದಾನದ ಕೊರತೆ ಇದ್ದರೆ ಹೇಳಿ ವಿದ್ಯಾರ್ಥಿಗಳನ್ನ ಕರೆದುಕೊಂಡು ಗ್ರಾಮಗಳಲ್ಲಿ ತಿರುಗಾಡಿ ಜೋಳಿಗೆ ಹಾಕಿ ಭಿಕ್ಷೆ ಬೇಡುವೆಮ ಭಿಕ್ಷೆ ಬೇಡಿ ಅನುದಾನ ತರುವೆ ಎಂದಿದ್ದಾರೆ.

ಬಾಗಲಕೋಟೆ ವಿವಿ ರದ್ದು ಪಡಿಸುವ ಕ್ರಮ ಖಂಡಿಸಿ ವಿದ್ಯಾರ್ಥಿಗಳ ಹೋರಾಟದಲ್ಲಿ ಭಾಗಿಯಾದ ಶ್ರೀಗಳು ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾಗಿ ಮಾತನಾಡಿದ ಶ್ರೀಗಲಕು ಬಾಗಲಕೋಟೆ ವಿವಿ ರದ್ದು ಮಾಡಲು ಹೋರಟಿರುವ ರಾಜ್ಯ ಸರ್ಕಾರದ ನಡೆಗೆ ಆಕ್ರೋಶ ಹೊರಹಾಕಿದ್ದಾರೆ.

ವಿವಿ ವಿದ್ಯಾರ್ಥಿಗಳಿಂದ ಧರಣಿ ಸತ್ಯಾಗ್ರಹ ಜಮಖಂಡಿ ನಗರದಲ್ಲಿ ಧರಣಿ ಸತ್ಯಾಗ್ರಹ ಕೈಗೊಂಡ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಪ್ರತಿಭಟನೆ ದೇಸಾಯಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು.

ವಿಶ್ವವಿದ್ಯಾಲಯ ಉಳಿಸಲು ಭಿಕ್ಷೆ ಬೇಡಿ ಅನುದಾನ ತರುವೆ – ಸರ್ಕಾರಕ್ಕೆ ಕೌಂಟರ್ ಕೊಟ್ಟ ಸ್ವಾಮೀಜಿ