ಉ.ಕ ಸುದ್ದಿಜಾಲ ವಿಜಯಪುರ :

ವಿಜಯಪುರದಲ್ಲಿ ನಿವೃತ್ತ ಶಿಕ್ಷಕನಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭರ್ಜರಿ ಗಿಫ್ಟ್ 5 ಗ್ರಾಂ ಬಂಗಾರ, 2 ಕೆಜಿ ಬೆಳ್ಳಿ ಕೊಡುಗೆ ಸೇರಿ ₹ 96 ಸಾವಿರ ಗುರು ಕಾಣಿಕೆ ನೀಡಿದ ಗ್ರಾಮಸ್ಥರು. ನಿವೃತ್ತ ಶಿಕ್ಷಕನಿಗೆ ಹರಿದು ಬಂದ ಗುರುಕಾಣಿಕೆ.

ಡಬಲ್ ಡೋರ್ ಪ್ರೀಡ್ಜ್ , 32 ಇಂಚು ಟಿವಿ, ಸಿದ್ದೇಶ್ವರ ಶ್ರೀ 25 ಭಾವಚಿತ್ರ, ಮಹಾನ್ ನಾಯಕರ ಫೋಟೋ ಗಿಫ್ಟ್. ನಿವೃತ್ತ ಹೊಂದಿದ ದೈಹಿಕ‌ ಶಿಕ್ಷಕ ಎನ್ ಜಿ ಕೊಟ್ಯಾಳರಿಗೆ ಭರ್ಜರಿ ಗುರು ಕಾಣಿಕೆ. ತೆರೆದ ಕಾರಿನಲ್ಲಿ ಅದ್ದೂರಿ  ಮೆರವಣಿಗೆ ಮೂಲಕ ಬೀಳ್ಕೊಟ್ಟ ಗ್ರಾಮಸ್ಥರು.

ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮಸ್ಥರ ಶಿಕ್ಷಕನಿಗೆ ಕೊಟ್ಟ ಗುರು ಕಾಣಿಕೆ. ಕೊಟ್ಯಾಳ ದಂಪತಿಗೆ ಅದ್ದೂರಿ ಗೌರವದ ಸನ್ಮಾನ. ಬೀಳ್ಕೊಡುವಾಗ ಭಾವುಕರಾದ ಬಿಜ್ಜರಗಿ ಗ್ರಾಮಸ್ಥರು. ಗ್ರಾಮದ ಪ್ರಮುಖ ರಸ್ತೆಯಲ್ಲಿ ಅದ್ಧೂರಿಯಾಗಿ ಮೆರವಣಿಗೆ.‌ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಬಿ.ಎ.ಕೆ.ಪ್ರೌಢ ಶಾಲೆ,ಪಿಯು ಕಾಲೇಜುನಲ್ಲಿ ಕರ್ತವ್ಯ ನಿರ್ವಹಿಸಿದ್ದ ದೈಹಿಕ‌ ಶಿಕ್ಷಕ ಎನ್ ಜಿ ಕೊಟ್ಯಾಳ.

40ವರ್ಷ ಸೇವೆ ಸಲ್ಲಿಸಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದ ದೈಹಿಕ ಶಿಕ್ಷಕ ಎನ್ ಜಿ ಕೊಟ್ಯಾಳ. ವಿದ್ಯಾರ್ಥಿಗಳು ನೀಡಿದ ಗುರು ಕಾಣಿಕೆ ಮೊತ್ತ 96 ಸಾವಿರ, ಜೊತೆಗೆ ನಿವೃತ್ತ ಶಿಕ್ಷಕನ ಹೆಸ್ರಲ್ಲಿ ಶಾಲೆಗೆ 1ಲಕ್ಷ ದೇಣಿಗೆ ಕೊಟ್ಟ ಹಳೆ ವಿದ್ಯಾರ್ಥಿ. ಗುರು ಕಾಣಿಕೆಯಿಂದ ಬಂದ ಮೊತ್ತ 96 ಸಾವಿರ ಹಾಗೂ ತಂದೆ ತಾಯಿ ಹೆಸ್ರಲ್ಲಿ 50 ಸಾವಿರ ಸೇರಿ 1 ಲಕ್ಷ. 46 ಸಾವಿರ ವಾಪಸ್ ಶಾಲೆಗೆ ದೇಣಿಗೆ ನೀಡಿ ಮಾದರಿಯಾದ ನಿವೃತ್ತ ಶಿಕ್ಷಕ.

ದೇಣಿಗೆ ಹಣ ಡಿಪಾಸಿಟ್ ಮಾಡಿ ಬಂದ ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ. ಗ್ರಾಮದ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು, ಸ್ವಾಮೀಜಿ, ಸಂಘ ಸಂಸ್ಥೆದಿಂದ ಬೀಳ್ಕೊಡುಗೆ ಸಮಾರಂಭ.