ಬಾಲಾಕೋಟ್ ವಾಯು ದಾಳಿ ವೇಳೆ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿ ಪಾಕ್ ಸೆರೆಯಾಗಿದ್ದ ಭಾರತೀಯ ವಾಯು ಸೇನೆಯ ಮಿಗ್ -21 ಯುದ್ಧ ವಿಮಾನದ ಕಮಾಂಡರ್ ಅಭಿನಂದನ್ ವರ್ಧಮಾನ್ ನಿವೃತ್ತಿಯಾಗಿದ್ದಾರೆ.
ಸೋರ್ಡ್ ಆರ್ಮ್ ವಾಯು ಪಡೆಯ 51ನೇ ತಂಡದಲ್ಲಿ ಒಬ್ಬರಾಗಿದ್ದರು. ರಕ್ಷಣಾ ಇಲಾಖೆ ಯೋಜನೆ ಪ್ರಕಾರ ಯುದ್ಧ ವಿಮಾನದಿಂದ ಕೆಳಗೆ ಇಳಿದಿದ್ದಾರೆ. 2004ರಲ್ಲಿ ವಾಯು ಪಡೆ ಸೇರಿದ್ದ ಅಭಿನಂದನ್ ವರ್ಧಮಾನ್, 18 ವರ್ಷಗಳ ಸೇವೆ ಬಳಿಕ ನಿವೃತ್ತಿ ಹೊಂದಿದ್ದಾರೆ. 2019ರಲ್ಲಿ ನಡೆದ ವಾಯು ದಾಳಿ ವೇಳೆ ಪಾಕ್‌ನ ಪ್ರತಿದಾಳಿಗೆ ಒಳಗಾಗಿ ಸೆರೆ ಸಿಕ್ಕಿದರು.