ಉ.ಕ‌ ಸುದ್ದಿಜಾಲ ಶಿವಮೊಗ್ಗ :

ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವುಗಳ ಸಮೇತ ವಾಹನ ವಶಕ್ಕೆ ಪಡೆದ ಶಿವಮೊಗ್ಗ ಭಜರಂಗದಳದ ಕಾರ್ಯಕರ್ತರು.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಆಕ್ರಮವಾಗಿ ಗೋವಿಗಳನ್ನ ಸಾಗಿಸುತ್ತಿದ್ದರು. ಹೊಸನಗರ ಕಡೆಯಿಂದ ಶಿರಾಳಕೊಪ್ಪದ ಕಡೆಗೆ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರು ಎತ್ತಿನ ಹೋರಿ ಹಾಗೂ ಒಂದು ಎಮ್ಮೆ ಕರುವನ್ನು ಭಜರಂಗದಳದ ಕಾರ್ಯಕರ್ತರು ರಸ್ತೆಗೆ ಅಡ್ಡಗಟ್ಟಿ ವಶ ಪಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲ್ಲೂಕಿನ ಬಟ್ಟೆಮಲ್ಲಪ್ಪದಲ್ಲಿ ನಡೆದಿದೆ.

ಗೋವುಗಳನ್ನ ಸಾಗಿಸುತಿದ್ದ ಸುಮಾರು ಆರು ಎತ್ತಿನಹೋರಿ ಹಾಗೂ ಒಂದು ಎಮ್ಮೆ ಕರುವನ್ನು ತುಂಬಿಕೊಂಡು ಹೊಸನಗರ ಕಡೆಯಿಂದ ಶಿರಾಳಕೊಪ್ಪದ ಕಡೆಗೆ ರಭಸವಾಗಿ ಹೋಗುತ್ತಿರುವುದನ್ನು ಗಮನಿಸಿದ ಬಟ್ಟೆಮಲ್ಲಪ್ಪದ ಭಜರಂಗದಳದ ಕಾರ್ಯಕರ್ತರಾದ ಅಭಿ, ವಿನಯ್, ಗುರುರಾಜ್, ಸಾಗರ್, ಶಶಿ, ರಮೀತಾ ಹಾಗೂ ವಿಜೇತ್ ರವರು ವಾಹನ ಅಡ್ಡಗಟ್ಟಿದಾಗ ವಾಹನದಲ್ಲಿರುವ ಚಾಲಕ ಹಾಗೂ ಇನ್ನೊಬ್ಬರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

ಅನುಮಾನದಿಂದ ವಾಹನದ ಹಿಂಭಾಗವನ್ನು ನೋಡಿದಾಗ ಅಕ್ರಮವಾಗಿ ಗೋವು ಸಾಗಾಟದ ಬಗ್ಗೆ ಗಮನಕ್ಕೆ ಬಂದು ವಾಹನ ಸಹಿತ ಹೊಸನಗರ ಪೊಲೀಸ್ ಠಾಣೆಗೆ ತರಲಾಗಿದೆ. ಹೊಸನಗರದ ಸಬ್ ಇನ್ ಸ್ಪೆಕ್ಟರ್ ನೀರರಾಜ್ ಹಾಗೂ ಸಿಬ್ಬಂದಿ ಕೇಸು ದಾಖಲಿಸಿಕೊಂಡು ವಾಹನ ಮಾಲೀಕರಿಗಾಗಿ ಶೋಧ ನಡೆಸುತ್ತಿದ್ದಾರೆ.