ಉ.ಕ ಸುದ್ದಿಜಾಲ ಬೆಳಗಾವಿ :

ಹಿಂಡಲಗಾ ಕೇಂದ್ರ ಕಾರಾಗೃಹದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆಗೆ ಯತ್ನಿಸಿದ್ದ ವಿಚಾರಣಾಧೀನ ಕೈದಿ ಚಿಕಿತ್ಸೆ ‌ಫಲಿಸದೇ ಸಾವು ಬೆಳಗಾವಿ ತಾಲೂಕಿನ ‌ಹಿಂಡಲಗಾ ಗ್ರಾಮದಲ್ಲಿರುವ ಕೇಂದ್ರ ಕಾರಾಗೃಹ.

ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದ ಮಂಜುನಾಥ ನಾಯ್ಕರ (20) ಮೃತ ದುರ್ದೈವಿ. ಮೂರು ತಿಂಗಳ ಹಿಂದಷ್ಟೇ ಪೋಕ್ಸೊ ಕೇಸ್ ಅಡಿ ಜೈಲು ಸೇರಿದ್ದ ಮಂಜುನಾಥ. ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪೋಕ್ಸೋ ಪ್ರಕರಣ.

ಹಿಂಡಲಗಾ ಜೈಲಿನಲ್ಲಿ ಪಾಲುಬಿದ್ದ ಕೊಠಡಿಗೆ ಹೋಗಿ ನೇಣಿಬಿಗಿದುಕೊಂಡು ಆತ್ಮಹತ್ಯೆಗೆ ಯತ್ನ. ಶನಿವಾರ ತಡರಾತ್ರಿ ಜೈಲಿನಲ್ಲಿ ಮಂಜುನಾಥ ನಾಯ್ಕರ್ ಆತ್ಮಹತ್ಯೆಗೆ ಯತ್ನ. ತಕ್ಷಣವೇ ಗಮನಿಸಿದ ಸಹ ಕೈದಿಗಳಿಂದ ಜೈಲು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಆ್ಯಂಬುಲೆನ್ಸ್ ಮೂಲಕ ಮಂಜುನಾಥನನ್ನು ಬೆಳಗಾವಿ ‌ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ರವಿವಾರ ಬೆಳಗ್ಗೆ ಜಿಲ್ಲಾಸ್ಪತ್ರೆಯಲ್ಲಿ ಮಂಜುನಾಥ ಮೃತ. ಬೆಳಗಾವಿ ‌ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.