ಉ.ಕ ಸುದ್ದಿಜಾಲ ಬೆಳಗಾವಿ :
ಚೀನಾಗೆ ಎಕ್ಸ್‌ಪೋರ್ಟ್ ಮಾಡುವ ಚಿಪ್ಪು ಹಂದಿ ಅಂತರಾಜ್ಯ ಕಳ್ಳರ ಗ್ಯಾಂಗ್ ಅರಣ್ಯ ಇಲಾಖೆ ವಶಕ್ಕೆ. ಚಿಪ್ಪು ಹಂದಿಯ ಅಂತಾರಾಜ್ಯ ಕಳ್ಳರ ಖೆಡ್ಡಾಕ್ಕೆ ಕೆಡವಿದ ಅರಣ್ಯ ಇಲಾಖೆ ಅಧಿಕಾರಿಗಳು.
ಬೆಳಗಾವಿ ಜಿಲ್ಲೆಯ ಖಾನಾಪುರ ವಲಯದ ಅರಣ್ಯ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ನೇತೃತ್ವದಲ್ಲಿ ಕಾರ್ಯಾಚರಣೆ ನೆರೆಯ ಚೀನಾದಲ್ಲಿ ಔಷಧಿ ಉತ್ಪಾದನೆಗೆಗೆ ಅತಿಹೆಚ್ಚು ಚಿಪ್ಪು ಹಂದಿ ಬಳಕೆ ಹಿನ್ನಲೆ,
ಖಾನಾಪುರದ ಅರಣ್ಯ ಪ್ರದೇಶದಲ್ಲಿ ಚಿಪ್ಪುಹಂದಿ ಬೇಟೆಯಾಡಿ ಚೀನಾಗೆ ಸಾಗಿಸುತ್ತಿದ್ದ ಜಾಲ. ಅರಣ್ಯ ಇಲಾಖೆ
ಕಾರ್ಯಾಚರಣೆ ವೇಳೆ ಇಬ್ಬರು ಆರೋಪಿಗಳ ವಶಕ್ಕೆ, ಮತ್ತಿಬ್ಬರು ಪರಾರಿ ಖಾನಾಪುರ ತಾಲೂಕಿನ ಲೋಂಡಾದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಗ್ಯಾಂಗ್.
ಈ ವೇಳೆ ದಾಳಿ ನಡೆಸಿ ಚಿಪ್ಪು ಹಂದಿ ರಕ್ಷಿಸಿ, ಇಬ್ಬರು ಆರೋಪಿಗಳು ವಶಕ್ಕೆ ಪಡೆಯಲಾಗಿದೆ. ಪರಾರಿ ಆಗಿರುವ ಮತ್ತಿಬ್ಬರು ಆರೋಪಿಗಳಿಗೆ ವಿಶೇಷ ತಂಡ ರಚಿಸಿ ಶೋಧಕಾರ್ಯ ಲೋಂಡಾ ಆರ್‌ಎಫ್ಓ ವೈ.ಪಿ ತೇಜ್, ಖಾನಾಪುರ ಆರ್‌ಎಫ್‌ಓ ಶ್ರೀಕಾಂತ್ ಪಾಟೀಲ ಕಾರ್ಯಾಚರಣೆಗೆ ಸಾಥ್.