ಉ.ಕ ಸುದ್ದಿಜಾಲ ತುಮಕೂರು :

ಪೊಲೀಸರು ‌ಗಸ್ತಿನಲ್ಲಿದ್ದಾಗ ಸಿಕ್ಕಿ ಬಿದ್ದ ಆದಾಯ ತೆರಿಗೆ ಇಲಾಖೆಯ ನಕಲಿ ಅಧಿಕಾರಿ. ಶಿವಣ್ಣ(45) ಬಂಧಿತ ನಕಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಸಂಕೇನಪುರದ ನಿವಾಸಿಯಾಗಿರೋ ಶಿವಣ್ಣ. ತನ್ನ ಇಟಿಯೋಸ್ ಕಾರಿನ ಹಿಂಬದಿ ಹಾಗೂ ಮುಭಾಗ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂದು ನಾಮಫಲಕ ಹಾಕಿಸಿಕೊಂಡಿದ್ದ. ಕುಣಿಗಲ್ ಪೊಲೀಸರು ಗಸ್ತಿನಲ್ಲಿದ್ದಾಗ ಅನುಮಾನಸ್ಪದವಾಗಿ. ಕಾರು ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡು ಹಲವರಿಗೆ ವಂಚನೆ ಮಾಡಿರೋ ಶಂಕೆ. ಈ ಹಿನ್ನೆಲೆ ಆತನನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವ ಕುಣಿಗಲ್ ಪೊಲೀಸರು. ಕುಣಿಗಲ್ ಪೊಲೀಸರಿಂದ ಮುಂದುವರಿದ ತನಿಖೆ.