ಉ.ಕ ಸುದ್ದಿಜಾಲ‌ ನಿಪ್ಪಾಣಿ :

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೇನಾಡಿಯಲ್ಲಿ ಮನೆಯ ಬೀಗ ಮುರಿದು  ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಗಸ್ಟ 12 ರಂದು ಮನೆಯ ಬೀಗ ಮುರಿದು ಮನೆಯಲ್ಲಿರುವ ತಿಜೋರಿಯಲ್ಲಿದ್ದ ಲಾಕರ್ ತೆರೆದು 1.32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 9 ಸಾವಿರ ರೂ. ನಗದು ಕಳುವು ಮಾಡಿದ ಬಗ್ಗೆ ಮಾಧುರಿ ಶರದ ಪಿಂಪಳೆ ಎಂಬುವವರು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. 

ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 60 ಗ್ರಾಂ. ಚಿನ್ನದ ಆಭರಣಗಳು, ಕಳುವಿಗೆ ಉಪಯೋಗಿಸಿದ ಒಂದು ಮೋಟರ್ ಸೈಕಲ್  ಸೇರಿ ಒಟ್ಟು ರೂ. 3 ಲಕ್ಷ 92 ಸಾವಿರ ರೂ. ಮೌಲ್ಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.