ಉ.ಕ‌ ಸುದ್ದಿಜಾಲ ವಿಜಯಪುರ‌ :

ಮಹಿಳೆಯ ಬಳಿಯಿದ್ದ 40 ಸಾವಿರ ದೋಚಿಕೊಂಡು ಕಳ್ಳರು  ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.

ಚಡಚಣ ಪಟ್ಟಣದ ಸಂತೆಗೆ ಬಂದಿದ್ದ ಮಹಾರಾಷ್ಟ್ರದ ಸಿದ್ದಾಪುರ ಗ್ರಾಮದ ಮಹಿಳೆ ಸರೋಜಿನಿ ಬಳಿಯಿದ್ದ 40 ಸಾವಿರ ಕಳ್ಳತನ ಮಾಡಲಾಗಿದೆ.ಸರೋಜನಿ ಕಿವಿಯೋಲೆ ತರಲೆಂದು ಬಂಗಾರ ಅಂಗಡಿಗೆ ಬಂದಿದ್ದಳು. ಪರಸ್ಪರ ಜಗಳವಾಡಿದಂತೆ ಮಾಡಿದ ಇಬ್ಬರು ಕಳ್ಳರು. ಬಳಿಕ ಸರೋಜಿನಿ ಮೈಮೇಲೆ ಬಿದ್ದು ಕೈಚೀಲದಲ್ಲಿದ್ದ 40 ಸಾವಿರ ಹಣ ದೋಚಿ ಪರಾರಿ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.