ಉ.ಕ ಸುದ್ದಿಜಾಲ ಕಾಗವಾಡ :

ಸಿಎಂ ಸಿದ್ದರಾಮಯ್ಯ ಪ್ರ್ಯಾಶುಕೆಶನ ವಿಚಾರ ಬೆಳಗಾವಿ ಜಿಲ್ಲರಯ ಕಾಗವಾಡ ಪಟ್ಟಣದಲ್ಲಿ ಶಾಸಕ ರಾಜು ಕಾಗೆ ಪ್ರತಿಕ್ರಿಯೆ ನೀಡಿದ್ದಾರೆ‌. ನನಗೆ ಕಾನೂನಿನ ಬಗ್ಗೆ ಹೆಚ್ಚು ಜ್ಞಾನವಿಲ್ಲ ಇಲ್ಲಾ. ಆ ವಿಚಾರಕ್ಕೆ ನಾನು ಏನೋ ಪ್ರತಿಕ್ರಿಯೆ ನಿಡೋದಿಲ್ಲ.

ಸಿಎಂ ಸಿದ್ದರಾಮಯ್ಯ ಪ್ರ್ಯಾಶುಕೆಶನ ವಿಚಾರ ಶಾಸಕ ರಾಜು ಕಾಗೆ ಅವರ ಮಾತು

ಇದೇ 22 ರಂದು ಬೆಂಗಳೂರಿಗೆ ಮೀಟಿಂಗ್ ಗೆ ಇದೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುತ್ತಿನಿ ಮಾಹಿತಿ ಇರದೇ ಹೇಳಿಕೆ ನೀಡುವುದಿಲ್ಲ. ಸಭೆಯಲ್ಲಿ ಗವರ್ನರ್ ಪ್ರ್ಯಾಶುಕೆಶನ ವಿಚಾರಕ್ಕೆ ಉತ್ತರ ನೀಡುವ ತೀರ್ಮಾನ ಮಾಡಲಾಗುತ್ತದೆ..

ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಕಾಗೆ ಸಿದ್ದರಾಮಯ್ಯ ಅವರು ದರೋಡೆ ಮಾಡಿದ್ದಾರೆ ಎಂದು ಪ್ರಶ್ನಿಸಿದ ಶಾಸಕ ರಾಜು ಕಾಗೆ ಬಿಜೆಪಿಯವರು ಕೇವಲ ಆರೋಪವನ್ನು ಮಾಡಿದ್ದಾರೆ. ಆರೋಪ ಸಾಬೀತು ಆಗಬೇಕು. ಅದಕ್ಕೆ ನಾವು ಉತ್ತರ ಕೋಡತಿವಿ.

ಆರೋಪ ಎದುರಿಸಲು ನಾವು ಸಿದ್ಧರಿದ್ದೇವೆ .ನಾವು ಯಾರಿಗೂ ಹೆದರುವುದಿಲ್ಲ. ಅದೇನೊ ದೋಡ್ಡ ಅಪರಾಧವಲ್ಲ. ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ನೋಡಿ ಸಹಿಸೋದೋಕ್ಕೆ ಆಗ್ತಾ ಇಲ್ಲಾ.

ರಾಜಕೀಯ ದುರುದ್ದೇಶದಿಂದ ಬೇಕಾಬಿಟ್ಟಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಜನರಿಂದ ಯಾವತ್ತೂ ಅಧಿಕಾರ ತೆಗೆದುಕೊಂಡಿಲ್ಲ. ಯಡಿಯೂರಪ್ಪನರ ಪ್ರಕರಣವೇ ಬೇರೆ ನಮ್ಮ ಪ್ರಕರಣವೇ ಬೇರೆ. ಕೋರ್ಟ್ ರಾಜಿನಾಮೆ ನೀಡುವಂತೆ ಹೇಳಿದ್ರೆ ನಾವ್ ರಾಜೀನಾಮೆ ನೀಡಲು ಸಿದ್ದ ಎಂದ ಕಾಗವಾಡ ಶಾಸಕ ರಾಜು ಕಾಗೆ.