ಉ.ಕ ಸುದ್ದಿಜಾಲ ರಾಯಬಾಗ :

ಇದು ಗುರು-ಶಿಷ್ಯರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿಯ ಸ್ಟೋರಿ ಪ್ರೀತಿಯ ಶಿಕ್ಷಕನ ವರ್ಗಾವಣೆಗೆ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕನ‌ ವರ್ಗಾವಣೆಗೆ ಕಣ್ಣಿರಾದ ವಿದ್ಯಾರ್ಥಿಗಳು.

ಪ್ರೀತಿಯ ಶಿಕ್ಷಕನ ವರ್ಗಾವಣೆಗೆ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಜಿ.ಎಂ.ಮಠಪತಿ ಎಂಬ ಶಿಕ್ಷಕನ ವರ್ಗಾವಣೆ ಆಗಿದ್ದಕ್ಕೆ ಬಿಕ್ಕಿಬಿಕ್ಕಿ ಅತ್ತ ಮಕ್ಕಳು. ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ಶಾಲೆಗೆ ವರ್ಗಾವಣೆಗೊಂಡಿರೋ ಶಿಕ್ಷಕ ಮಠಪತಿ.

ಏಷ್ಯಾ ಬುಕ್ ಆಪ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರೋ ಶಿಕ್ಷಕ ಜಿ.ಎಂ ಮಠಪತಿ ಕಳೆದ ಹನ್ನೆರೆಡು ವರ್ಷಗಳಿಂದ ಅಳಗವಾಡಿ ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನೆಚ್ಚಿನ ಶಿಕ್ಷಕನ ವರ್ಗಾವಣೆ ಆಗಿದ್ದಕ್ಕೆ ಬೇಸರಗೊಂಡ ಮಕ್ಕಳು ಶಾಲಾ ಆವರಣದಲ್ಲಿಯೇ ಗೋಳಾಡಿ ಅತ್ತರು.

ಶಿಕ್ಷಕನನ್ನು ಬಿಗಿದಪ್ಪಿಕೊಂಡು ನಮ್ಮ ಶಾಲೆಯಿಂದ ಹೋಗಬೇಡಿ, ಇಲ್ಲಿಯೇ ಇರ್ರೀ ಎಂದು ಕಣ್ಣಿರಾಕಿದ ಮಕ್ಕಳು.