ಉ.ಕ ಸುದ್ದಿಜಾಲ ಕಾಗವಾಡ 

ಕಳೆದವಾರ ಬೆಂಗಳೂರಿಗೆ ಪ್ರವಾಸ ಮಾಡಿದ್ದ ಶ್ರೀಮಂತ ಪಾಟೀಲ, ಬೆಂಗಳೂರು ಪ್ರವಾಸ ಬಳಿಕ ಜ್ವರ ಕಾಣಿಸಿಕೊಂಡ ಹಿನ್ನಲೆ RTPCR ತಪಾಸಣೆ ಬಳಿಕ ಕಾಗವಾಡ ಶಾಸಕ ಶ್ರೀಮಂತ ಪಾಟೀಲಗೆ ಕೊರೊನಾ ಧೃಡವಾಗಿದೆ.

ಕಾಗವಾಡ ತಾಲೂಕಾ ಆಸ್ಪತ್ರೆಯಲ್ಲಿ RTPCR ತಪಾಸಣೆ ಮಾಡಿದ ಶಾಸಕ ಶ್ರೀಮಂತ ಪಾಟೀಲಗೆ ಕೊರೊನಾ ಧೃಢವಾದ ಹಿನ್ನಲೆ ಸದ್ಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯಲ್ಲಿರುವ ತಮ್ಮ ಸ್ವ ಗೃಹದಲ್ಲಿ ಹೊಂ ಕ್ವಾರಂಟೈನ ಆಗಿದ್ದಾರೆ. ಕಳೆದ ವಾರದಿಂದ ನನ್ನ ಸಂಪರ್ಕಕ್ಕೆ ಬಂದವರು ಕೊವೀಡ್ ತಪಾಸಣೆ ಮಾಡುವಂತೆ ಶಾಸಕ ಶ್ರೀಮಂತ ಪಾಟೀಲ ಮನವಿ ಮಾಡಿದ್ದಾರೆ.

ಶ್ರೀಮಂತ ಪಾಟೀಲ ಕ್ಷೇತ್ರದ ಜನರಲ್ಲಿ ಮನವಿ

ಆತ್ಮೀಯರೇ..
     ನಾನು ಕಳೆದ 4-5 ದಿನಗಳ ಹಿಂದೆ ನಮ್ಮ ಕ್ಷೇತ್ರದ ವಿವಿಧ ಅಭಿವೃದ್ಧಿ ಕೆಲಸದ ನಿಮಿತ್ಯವಾಗಿ ಬೆಂಗಳೂರಿಗೆ ತೆರಳಿದ್ದು, ನಾನು ನಿನ್ನೆ ಮರಳಿ ಬೆಂಗಳೂರಿನಿಂದ ಆಗಮಿಸಿದ ನಂತರ ಇಂದು ಕಾಗವಾಡದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿರುತ್ತದೆ, ನನಗೆ ಯಾವುದೇ ರೋಗ ಲಕ್ಷಣಗಳು ಇರುವುದಿಲ್ಲ, ನಾನು ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಹೋಂ ಐಸೋಲೇಷನ್ ದಲ್ಲಿ ಇರುತ್ತೇನೆ, ಯಾರು ಭಯಪಡಬೇಕಾದ ಅವಶ್ಯಕತೆ ಇಲ್ಲ, ನನ್ನ ಸಂಪರ್ಕಕ್ಕೆ ಬಂದಿರುವರು ತಮ್ಮಲಿ ಯಾವುದೇ ರೋಗಲಕ್ಷಣಗಳು ಕಾಣಿಸಿದರೆ ದಯವಿಟ್ಟು ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ, ವೈದ್ಯರ ಸಲಹೆಯನ್ನು ಪಡೆಯಿರಿ.

ಈಗ ಕೋವಿಡ್ ಸೋಂಕು ಮತ್ತೆ ವ್ಯಾಪಕವಾಗಿ ಹರಡುತ್ತಿದ್ದು, ಕಡ್ಡಾಯವಾಗಿ ಎಲ್ಲರೂ ಮಾಸ್ಕನ್ನು ಧರಿಸಿ, ಸ್ಯಾನಿಟೈಸರ್ ಉಪಯೋಗಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿರಿ. ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ.