ಉ.ಕ ಸುದ್ದಿಜಾಲ ಬೆಳಗಾವಿ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು ಸಿಇಟಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ಬೆಳಗಾವಿ ವಿದ್ಯಾರ್ಥಿ ರಾಜ್ಯಕ್ಕೆ 108ನೇ ರ್ಯಾಂಕ್ ಬರುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ ಬೆಳಗಾವಿ ನಗರದ ಶಿವಬಸಪ್ಪ ಗಿರನ್ನವರ ಪಿಯು ಕಾಲೇಜಿನ ರಾಯೇಶ್ವರ ಪ್ರಕಾಶ ಅನ್ವೇಕರ್ 108ನೇ ರ್ಯಾಂಕ್ ಪಡೆದು ಸಾಧನೆ ಮೆರೆದ ವಿದ್ಯಾರ್ಥಿ.
ದ್ವಿತೀಯ ಪಿಯುಸಿಯಲ್ಲಿ ಶೇ.96ರಷ್ಟು ಅಂಕ ಗಳಿಸಿದ್ದ ರಾಯೇಶ್ವರ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಶೇ.99.53ರಷ್ಟು ಅಂಕ ಪಡೆದಿದ್ದಾನೆ. ಶ್ರೀ ಚೈತನ್ಯ ಸೆಂಟರ್ ನಲ್ಲಿ ಸಿಇಟಿ ಕೋಚಿಂಗ್ ಪಡೆದಿದ್ದಾನೆ.ರಾಯೇಶ್ವರ ತಂದೆ ಪ್ರಕಾಶ ಹೊಸಪೇಟೆಯ ಐಎಸ್ ಆರ್ ಸಕ್ಕರೆ ಕಾರ್ಖಾನೆಯಲ್ಲಿ ಎಚ್ಆರ್ ಅಗಿ ಕೆಲಸ ಮಾಡುತ್ತಿದ್ದರೆ, ತಾಯಿ ವರ್ಷಾ ಬೆಳಗಾವಿಯ ಶ್ರೀಚೈತನ್ಯ ಟೆಕ್ನೋ ಸ್ಕೂಲ್ ಉಪ ಪ್ರಾಂಶುಪಾಲರಾಗಿದ್ದಾರೆ.
ಟಿಳಕವಾಡಿ ಫಸ್ಟ್ ಗೇಟ್ ಬಳಿಯ ಮನೆಯಲ್ಲಿ ರಾಯೇಶ್ವರ ಕುಟುಂಬ ವಾಸವಿದೆ. ಬೆಳಗಾವಿ ನಗರದ ಶಿವಬಸಪ್ಪ ಗಿರನ್ನವರ ಪಿಯು ಕಾಲೇಜು ವಿದ್ಯಾರ್ಥಿ ಆಗಿರುವ ರಾಯೇಶ್ವರ, ಶ್ರೀ ಚೈತನ್ಯ ಸೆಂಟರ್ ನಲ್ಲಿ ಕೋಚಿಂಗ್ ಪಡೆದಿದ್ದಾನೆ ಈಗ ಬೆಳಗಾವಿ ಜಿಲ್ಲೆಯ ಜನ ಹಾಗೂ ಕುಟುಂಬಸ್ಥರ ಸಂತಸ ವ್ಯಕ್ತಪಡಿಸಿದ್ದಾರೆ.
ಸಿಇಟಿ ಪರೀಕ್ಷೆ ರಾಜ್ಯಕ್ಕೆ 108ನೇ ರ್ಯಾಂಕ್ ಪಡೆದ ಬೆಳಗಾವಿ ಯುವಕ
