ಉ.ಕ ಸುದ್ದಿಜಾಲ ಬೆಳಗಾವಿ :

ಜೈನರ ಪವಿತ್ರ ಸಮ್ಮೇದ ಶಿಖರಜಿ ತೀರ್ಥ ಕ್ಷೇತ್ರವನ್ನು ಪ್ರವಾಸಿ ತಾಣ ಮಾಡುವಂತೆ ಜಾರ್ಖಂಡ್ ಮತ್ತು ಕೇಂದ್ರ ಸರಕಾರಗಳು ಆದೇಶ ಹೊರಡಿಸಿರುವ ಹಿನ್ನಲೆ ಜೈನರ ತೀರ್ಥಕ್ಷೇತ್ರ ಪ್ರವಾಸಿ ತಾಣ ಮಾಡದಂತೆ ಆಗ್ರಹಿಸಿ. ಬೆಳಗಾವಿಯಲ್ಲಿ ಜೈನ ಯುವ ಸಂಘಟನೆಯಿಂದ ಪ್ರತಿಭಟನೆ.

ಜಾರ್ಖಂಡ್ ಮತ್ತು ಕೇಂದ್ರ ಸರಕಾರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ. ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ಮಾಡಿದರು. ಪ್ರತಿಭಟನಾ ರ್ಯಾಲಿಯಲ್ಲಿ 8 ನೂರಕ್ಕೂ ಅಧಿಕ ಜನ ಭಾಗಿಯಾಗಿದ್ದರು.

ಜಾರ್ಖಂಡ್ ಮತ್ತು ಕೇಂದ್ರ ಸರಕಾರಗಳು ಆದೇಶ ಹಿಂಪಡೆಯುವಂತೆ ಆಗ್ರಹ. ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ. ಪವಿತ್ರ ಕ್ಷೇತ್ರವನ್ನು ಪ್ರವಾಸಿ ತಾಣ ಮಾಡಿದ್ರೆ ಪಾವಿತ್ರ್ಯತೆಗೆ ದಕ್ಕೆ ಬರುವ ಸಾದ್ಯತೆ. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ಭಾಗಿ.