ಉ.ಕ ಸುದ್ದಿಜಾಲ ಕಾಗವಾಡ :

ನೆರೆ ಸಂತ್ರಸ್ಥರ ಗೋಳ ಕೇಳವರೆ ಇಲ್ಲದಂತಾ ಪರಸ್ಥಿತಿ ನಿರ್ಮಾಣವಾಗಿದ್ದು ಸ್ವಯಂ ಪ್ರೇರಿತವಾಗಿ ನೆರೆ ಸಂತ್ರಸ್ಥರು ಡಿ.19 ಕ್ಕೆ ನಮ್ಮಗೆ ನೆರೆ ಪರಿಹಾರ ಹಾಗೂ ವಸತಿ ಮನೆಗಳನ್ನ ನಿರ್ಮಾಣ ಮಾಡದೆ ಹೋದರೆ ಕಾಗವಾಡ ತಹಶೀಲ್ದಾರ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ ಶಹಪೂರ ನೆರೆ ಸಂತ್ರಸ್ಥರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗಳ ಗ್ರಾ.ಪಂ ವ್ಯಾಪ್ತಿಗೆ ಬರುವ ಶಹಪೂರ ಗ್ರಾಮದಲ್ಲಿ ಸುಮಾರು‌ 110 ಮನೆಗಳು ಜಲಾವೃತಗೊಂಡಿವೆ. ಕಳೆದ 2019 ಹಾಗೂ 2021 ರ ಕೃಷ್ಣ ನದಿಯ ಪ್ರವಾಹಕ್ಕೆ ತುತ್ತಾದ ಶಹಾಪೂರ ಗ್ರಾಮವು ಸುಮಾರು 110 ಕುಟುಂಬಗಳ ಮನೆಗಳು ಸಂಪೂರ್ಣವಾಗಿ ಪ್ರವಾಹಕ್ಕೆ ಸಿಕ್ಕು ಹಾನಿಯಾಗಿವೆ. 2019ರಲ್ಲಿ ಸುಮಾರು 42 ಮನೆಗಳು ‘ಎ’ ಮತ್ತು ‘ಬಿ’ ಶ್ರೇಣಿಯಲ್ಲಿ ಸರಕಾರ ಸರ್ವೆ ಮಾಡಿ ಅಧಿಕೃತವಾಗಿ ಆದೇಶ ಹೊರಡಿಸಿದೆ.

ಆದರೆ, ಆ ಮನೆಗಳು 2021ರ ವರೆಗೆ ಮಂಜೂರು ಆಗಿರುವುದಿಲ್ಲಾ ಮತ್ತೆ 2021ರಲ್ಲಿ ಬಂದ ಕೃಷ್ಣಾನದಿಯ ಪ್ರವಾಹಕ್ಕೆ ಸಿಲುಕಿದ ಮನೆಗಳು 2019ರ ಪಟ್ಟಿ ಒಳಗೊಂಡಂತೆ ಸುಮಾರು 110 ಮನೆಗಳು ಸಂಪೂರ್ಣವಾಗಿ ಹಾನಿಯಾಗಿದ್ದು ವರದಿ ಇದೆ. ಆದರೆ, ಬೆಳಗಾವಿ ಜಿಲ್ಲಾಡಳಿತ ಹಾಗೂ ಕಾಗವಾಡ ತಹಶಿಲ್ದಾರ ಕಚೇರಿ ಅಧಿಕಾರಿಗಳು ಹಾನಿಯಾದ ಮನೆಗಳನ್ನು ದನಗಳ ಕೊಟ್ಟಿಗೆ ಎಂದು ಹಾಗೂ ‘ಸಿ’ ಶ್ರೇಣಿಯಲ್ಲಿ ಹಾಕಿ ಕೈ ತೊಳೆದುಕೊಂಡಿದ್ದಾರೆ.

ನೆರೆ ಸಂತ್ರಸ್ಥರ ಗೋಳು ಕೇಳವರ್ಯಾರು

ಈ ಮಲತಾಯಿ ಧೋರಣೆಯಿಂದ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಶಹಪೂರ ಗ್ರಾಮಸ್ಥರು ಹಲವಾರು ಬಾರಿ ಮನವಿಯನ್ನು ಮಾಡಿಕೊಂಡರೂ ಕೂಡಾ ಕಾಗವಾಡ ಶಾಸಕ‌ ಶ್ರೀಮಂತ ಪಾಟೀಲ ಹಾಗೂ ತಹಶೀಲ್ದಾರ ನಮ್ಮ ಮನವಿಗಳಿಗೆ ಸ್ಪಂದಿಸಿಲ್ಲ.