ಉ.ಕ ಸುದ್ದಿಜಾಲ ಕಾಗವಾಡ :

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಪೂರ್ವ ಭಾಗಕ್ಕೆ ನೀರೋದಗಿಸುವ ಐನಾಪುರ ಏತ ನೀರಾವರಿ ಯೋಜನೆ ಕಾಲುವೆಯ ನೀರು ಬಸಿವಿಕೆಯಿಂದ ಐನಾಪುರದ ನೂರಾರು ಎಕ್ಕರ ಫಲವತ್ತಾದ ಭೂಮಿ ಹಾಳಾಗಿ ಹೋಗಿದ್ದು ಕಾಲುವೆ ರಿಪೇರಿಗೆ ೫ ಕೋಟಿ ರೂ ಅನುದಾನದಡಿ ಶುಕ್ರವಾರ ಶಾಸಕ ಶ್ರೀಮಂತ ಪಾಟೀಲ ಕಾಮಗಾರಿಗೆ ಚಾಲನೆ ನೀಡಿದರು.

ಐನಾಪುರದಲ್ಲಿ ಐದು ಕೋಟಿ ರೂ ವೆಚ್ಚದ ಮೊದಲ ಹಂತದ ಕಾಲುವೆ ರಿಪೇರಿಗೆ ಚಾಲನೆ ನೀಡಿ ಮಾತನಾಡಿ ಐನಾಪುರ ಪೂರ್ವ ಭಾಗದ ರೈತರ ಜಮೀನುಗಳಿಗೆ ನೀರೋದಗಿಸುವ ಯೋಜನೆ ಇದಾಗಿದ್ದು, ಕೃಷ್ಣಾ ನದಿಯಿಂದ ಸುಮಾರು  ಸಾವಿರಾರು ಹೆಕ್ಟರ್ ಭೂ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆ ನದಿಯಿಂದ ಹಾಯ್ದು ಹೋಗುವ ಮೇಲು ಕಾಲುವೆಯ ನೀರು ಬಸಿವಿಕೆಯು ಹೆಚ್ಚಾಗಿರುವದರಿಂದ ಸುಮಾರು ಐದು  ಸಾವಿರ ಎಕ್ಕರ ಭೂಮಿ ಕಾಲುವೆಯ ಅಕ್ಕಪಕ್ಕದಲ್ಲಿರುವದರಿಂದ ಜಮೀನುಗಳಿಗೆ ನೀರು ಹೊಕ್ಕು ಸುಮಾರು 4 ರಿಂದ 5 ತಿಂಗಳುಗಳವರೆಗೆ ನೀರು ಇರುವದರಿಂದ ಬೆಳೆ ಬೆಳೆಯಲು ಆಗುತ್ತಿಲ್ಲ,

ಶ್ರೀಮಂತ ಪಾಟೀಲ ಸುಮಾರು ಐದು ಕೋಟ ವೆಚ್ಚದಲ್ಲಿ ಕಾಲುವೆ ದುರಸ್ಥಿ ಕಾಮಗಾರಿಗೆ ಚಾಲನೆ

ಈ ಬಗ್ಗೆ ಐನಾಪುರದ ರೈತರು ನನ್ನ ಗಮನಕ್ಕೆ ತಂದಾಗ ತಕ್ಷಣವೇ 5 ಕೋಟಿ ರೂ ಅನುದಾನವನ್ನು ಮಂಜೂರುಗೊಳಿಸಿ ರಿಪೇರಿ ಕಾರ್ಯಕ್ಕೆ ಚಾಲನೆ ನೀಡಿರುವುದಾಗಿ ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಅದೇ ಪ್ರಕಾರ ಪಶ್ಚಿಮ ಬಾಗದ ಕಾಕುವೆಗೆ 3 ಕೋಟಿ ರೂ ಅನುದಾನ ಮಂಜುರುಗೊಳಿಸಲಾಗಿದೆ ಎಂದರು.