ಉ.ಕ ಸುದ್ದಿಜಾಲ ಮೋಳೆ :

ಪ್ರತಿಯೊಬ್ಬ ವಿದ್ಯಾರ್ಥಿ ಸಾಧಿಸಬೇಕೆಂದರೆ ಆತನಲ್ಲಿ ಛಲ ಅನ್ನೋದು ಇದ್ದಾಗ ಮಾತ್ರ ಏನಾದರು ಸಾಧಿಸಲು ಸಾಧ್ಯ ಎಂದು ಲೆಕ್ಕ ಪರಿಷೋಧಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಹಾಂತೇಶ ಅಡಹಳ್ಳಿ ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳ ಉದ್ಘಾಟನಾ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ಯಾರು ಲೆಕ್ಕ ಪರಿಷೋಧಕ ಪರೀಕ್ಷೆಯನ್ನ ಬರೆಯಲು ಇಚ್ಚಿಸುವ ವಿದ್ಯಾರ್ಥಿಗಳು ಪಿಯುಸಿ ಮುಗಿದ ನಂತರ ಲೆಕ್ಕ ಪರಿಷೋಧಕ ಪರೀಕ್ಷೆ ಬರೆಯಬಹುದು ಆದರೆ, ವಿದ್ಯಾರ್ಥಿಗಳು ಪದವಿ ಮುಗಿದ ಮೇಲೆ ಲೆಕ್ಕ ಪರಿಷೋಧಕ ತರಬೇತಿ ಪಡೆದರೆ ವಿದ್ಯಾರ್ಥಿಗಳಿಗೆ ಅನಕೂಲವಾಗುತ್ತೆ, ವಿದ್ಯಾರ್ಥಿಗಳಿಗೆ ಲೆಕ್ಕ ಪರಿಷೋಧಕ ಪರೀಕ್ಷೆ ಬಗ್ಗೆ ಇರುವ ಗೊಂದಲವನ್ನ ಮಹಾಂತೇಶ ಅಡಹಳ್ಳಿ ಪರಿಹರಿಸಿ ಹೇಗೆಲ್ಲ ಲೆಕ್ಕ ಪರಿಷೋಧಕ ಪರೀಕ್ಷೆ ಎದುರಿಸಬೇಕು ಎಂದು ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು.

ಮೋಳೆ ಗ್ರಾಮದ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ ಇತಿಹಾಸ ಉಪನ್ಯಾಸಕರಾದ ಶ್ರೀಕಾಂತ ಜಾಧವ, ಸಮಾಜ ಶಾಸ್ತ್ರ ಉಪನ್ಯಾಸಕರಾದ ಅನಿಲ ಕಾಂಬಳೆ, ಲೆಕ್ಕಶಾಸ್ತ್ರ ಉಪನ್ಯಾಸಕರಾದ ಪ್ರವೀಣ ಬಡಿಗೇರ ಈ ಮೂರು ಉಪನ್ಯಾಸಕರಿಗೆ ಕಾಲೇಜ ಆಡಳಿತ ಮಂಡಳಿಯಿಂದ ಅಭಿನಂದನಾ ಗೌರವ ಸತ್ಕಾರ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಅಶೋಕ ಪ್ರಸಾರಕ ಮಂಡಳಿ ಅಧ್ಯಕ್ಷ ಈಶ್ವರ ವಾಂಡಿಮಾಳಿ, ಕಾಲೇಜ ಪ್ರಾಚಾರ್ಯ ಆರ್ ಜೆ ಸಂಗಪ್ಪಗೋಳ, ಆಡಳಿತ ಮಂಡಳಿ ಸದಸ್ಯರಾದ ಶಿವಾನಂದ ಹೊಸಮನಿ, ಗಜಾನನ ಯರಂಡೋಲಿ, ಗೋರಖನಾಥ ಕೋಳೆಕರ ಮದಪ್ಪ ಮದ್ಯಪ್ಪಗೋಳ, ವಿರುಪಾಕ್ಷ ಆರಿ, ಎಸ್ ಎಸ್ ಹುಂಡೇಕರ, ಎಂ ಕೆ ಮಂಜೆ ಹಾಗೂ ಎಸ್ ಎಲ್ ಹವಳೆ ಗ್ರಾಮದ ಮುಖಂಡರಾದ ಶ್ರೀಕಾಂತ ಅಡಹಳ್ಳಿ, ಪ್ರಮೋದ ಹೊಂಬಳ್ಳಿ, ಬಸವರಾಜ ಹಿಪ್ಪಲಕರ ಇತರರು ಉಪಸ್ಥಿತರಿದ್ದರು.