ಉ.ಕ ಸುದ್ದಿಜಾಲ ಮೋಳೆ :
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕರಾದ ಆರ್ ಡಿ ಸೋಲಂದಕರ ಅವರಿಗೆ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ನೆರವೆರಿತು.
ಪ್ರಾಥಮಿಕ ಶಾಲಾ ಶಿಕ್ಷಕರಾಗಿ 36 ವರ್ಷಗಳ ಕಾಲ ಸೇವೆಸಲ್ಲಿಸಿದ್ದು ಇಲಾಖೆಯ ಹಾಗೂ ಮಕ್ಕಳ ಮನಸ್ಸನ್ನು ಗೆದ್ದು ಉನ್ನತಮಟ್ಟದ ಸೇವೆಸಲ್ಲಿಸಿದ ಇವರಿಗೆ ಮೋಳೆ ಗ್ರಾಮದ ಮುಖಂಡರಿಂದ ಹಾಗೂ ಸಂಭಂದಿಗಳಿಂದ ಆರ್ ಡಿ ಸೋಲಂದಕರ ಶಿಕ್ಷಕರಿಗೆ ಸತ್ಕಾರ ನೆರವೆರಿಸಲಾಯಿತು.
ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಆರ್ ಡಿ ಸೋಲಂದಕರ ಶಿಕ್ಷಕರು ಮಾತನಾಡಿದರು, ಶಿಕ್ಷಕ ವೃತ್ತಿ ಎನ್ನುವುದು ಶ್ರೇಷ್ಠವಾದ ಕಾಯಕ, ಈ ಕಾಯಕ ಮಾಡುವುದು ಎಲ್ಲರಿಗೂ ದೊರೆಯುವುದಿಲ್ಲ. ಈ ಕಾಯಕ ಮಾಡಲು ನಾವು ಪುಣ್ಯ ಮಾಡಿರಬೇಕು ಅಂದಾಗ ಮಾತ್ರ ದೇವರ ಜೊತೆ ಕೆಲಸ ಮಾಡಲು ಸಾಧ್ಯ. ಒಬ್ಬ ಪಾಲಕರಿಗೆ ತಮ್ಮ ಮಕ್ಕಳ ಬಗ್ಗೆ ಎಷ್ಟು ಜವಾಬ್ದಾರಿ ಇರುತ್ತೊ ಅಷ್ಟೇ ಜವಾಬ್ದಾರಿ ಶಿಕ್ಷಕರಿಗೆ ಇರುತ್ತೆ, ಈ 36 ವರ್ಷಗಳ ಸೇವೆಯಲ್ಲಿ ಸಾವಿರಾರು ಮಕ್ಕಳು ನನ್ನ ಕೈಯಲ್ಲಿ ಕಲೆತು ಉನ್ನತ ಹುದ್ದೆಯಲ್ಲಿವೆ. ಆ ಉನ್ನತ ಹುದ್ದೆಯಲ್ಲಿರುವ ಮಕ್ಕಳು ಬೇಟಿಯಾದಾಗ ನನ್ನ ಯೋಗಕ್ಷೇಮದ ಜೊತೆಗೆ ನನ್ನ ಆಶೀರ್ವಾದ ಪಡೆಯುತ್ತಾರಲ್ಲ ಅದರಲ್ಲಿ ಇರುವಂತ ಆನಂದ ಮತ್ತೆದುರಲ್ಲಿ ಇಲ್ಲ ಎಂದು ಭಾವುಕ ನುಡಿಗಳನ್ನ ಆಡಿದರು.
ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಬೂತಾಳಿ ಥರಥರೆ, ಗ್ರಾ.ಪಂ ಸದ್ಯರು, ಮರಾಠಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ನಿವೃತ ಶಿಕ್ಷಕರು ಹಾಗೂ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.