ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ನಡೆದ ರಾಬರಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಆಟಿಕೆ ಪಿಸ್ತೂಲ್ ತೋರಿಸಿ 1.17 ಕೋಟಿ ಹಣವಿದ್ದ ವಾಹನ ಹೈಜಾಕ್ ಮಾಡಿದ್ದ ಆರೋಪಿಗಳು ಅಂದರ್.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟಪಾಡಿ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್ ವಾಹನ ಹೈಜಾಕ್ ಮಾಡಿದ್ದ ನವನೀತ ಸಾಸ್ತೆ (35) ಸೂರಜ್ ಸಾಸ್ತೆ (25) ಬಂಧಿತರು. ಕಳೆದ ವಾರ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದಿದ್ದ ರಾಬರಿ ಪ್ರಕರಣ ಬೇಧಿಸಿದ ಪೊಲೀಸರು.

ಕೇರಳದ ಚಿನ್ನಾಭರಣ ವ್ಯಾಪಾರಿ ಭರತ್‌ ಕಾರಿನಲ್ಲಿದ್ದ ಕೋಟ್ಯಾಂತರ ಹಣ ಎಗರಿಸಲು ಸ್ಕೆಚ್ ಕೇರಳದಿಂದ ಕೊಲ್ಲಾಪುರಕ್ಕೆ ಗೋಲ್ಡ್ ಸ್ಮಗ್ಲಿಂಗ್ ಮಾಡ್ತಿದ್ದ ಭರತ್ ಗೋಲ್ಡ್ ಸ್ಮಗ್ಲಿಂಗ್ ಮಾಡಲೆಂದೇ ಕಾರು ಮಾಡಿಫೈ ಮಾಡಿ ಕಂಪಾರ್ಟಮೆಂಟ್ ನಿರ್ಮಾಣ.

ಇದೇ ಕಂಪಾರ್ಟಮೆಂಟ್‌ನಲ್ಲೇ ಚಿನ್ನ ತಂದು ಮಾರಿ ಬಳಿಕ ಹಣ ಒಯ್ತಿದ್ದ ಭರತ್ ಸಂಬಂಧಿಕರು. ಕಳೆದ ವಾರ ಚಿನ್ನಾಭರಣ ಮಾರಿ 1.17 ಕೋಟಿ ಹಣ ಕಾರಿನಲ್ಲಿಟ್ಟಿಕೊಂಡು ಕೇರಳಕ್ಕೆ ತೆರಳುವಾಗ ದರೋಡೆ.

ಆಟಿಕೆ ಪಿಸ್ತೂಲ್ ತೋರಿಸಿ ಕಾರಿನಲ್ಲಿದ್ದ ಸೂರಜ್, ಅಜೇಯ್, ಚಾಲಕ ಇರ್ಫಾನ್‌ನನ್ನು ಕೆಳಗಿಸಿದ್ದ ಇಬ್ಬರು ಬಳಿಕ ಕೋಟ್ಯಾಂತರ ರೂಪಾಯಿ ಹಣವಿದ್ದ ವಾಹನ ಸಮೇತ ಪರಾರಿಯಾಗಿದ್ದ ಆರೋಪಿಗಳು. ಉದ್ಯಮಿ ಭರತ್ ಮಾಜಿ ಚಾಲಕನ ಸ್ನೇಹಿತನಾಗಿದ್ದ ಆರೋಪಿ ನವನೀತ್ ಸಾಸ್ತೆ.

ಆತ ನೀಡಿದ ಮಾಹಿತಿ ಆಧರಿಸಿಯೇ ಹೆದ್ದಾರಿ ಮೇಲೇಯೇ ಕಾರು ದರೋಡೆ. ತಕ್ಷಣವೇ ವಾಹನ ದರೋಡೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನೆ ಹೈಜಾಕ್ ಆದ ವಾಹನ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದ್ದ ಬೆಳಗಾವಿ ಪೊಲೀಸರು.

ಪೊಲೀಸರು ಬೆನ್ನು ಬಿದ್ದಿರುವ ಮಾಹಿತಿ ಅರಿತ ಆರೋಪಿಗಳು ರೂಟ್ ಚೇಂಜ್ ಹುಕ್ಕೇರಿ ತಾಲೂಕಿನ ನೇರ್ಲಿ ಗ್ರಾಮದ ಸಮೀಪ ವಾಹನ ನಿಲ್ಲಿಸಿ 16 ಲಕ್ಷ ಹಣ ಎಗರಿಸಿ ಪರಾರಿಯಾಗಿದ್ದರು.

ಪೊಲೀಸರ ತಪಾಸಣೆ ವೇಳೆ 1.1 ಕೋಟಿ ಹಣದ ಸಮೇತ ಕಾರು ಪತ್ತೆ ಮೊಬೈಲ್ ಫೋನ್ ಟ್ರ್ಯಾಪ್ ಮಾಡಿ ಸಾಂಗ್ಲಿಯಲ್ಲಿ ಆರೋಪಿಗಳು‌ ಅರೆಸ್ಟ್ ಮಾಡಲಾಗಿದೆ. ಆರೋಪಿಗಳಿಂದ 16 ಲಕ್ಷ ನಗದು ಹಾಗೂ ಆಟಿಕೆ ಪಿಸ್ತೂಲ್ ಜಪ್ತಿ ಮಾಡಿಕೊಂಡ ಪೋಲಿಸರು.