ಉ.ಕ ಸುದ್ದಿಜಾಲ ಹುಬ್ಬಳ್ಳಿ :

ಬೆಳಗಾವಿ ಎಸ್ ಡಿ ಎ ರುದ್ರಣ್ಣ ಆತ್ಮಹತ್ಯೆ ವಿಚಾರ ಬಗ್ಗೆ ಶಾಸಕ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದು ತನಿಖೆ ಆಗಲಿ, ವರದಿ ಏನು ಬರುತ್ತೆ ಅದರ ಮೇಲೆ ಮಾತನಾಡೋಣ ಎಂದಿದ್ದಾರೆ.

ಬೆಳಗಾವಿ ಎಸ್ ಡಿ ಎ ರುದ್ರಣ್ಣ ಆತ್ಮಹತ್ಯೆ ವಿಚಾರ : ಲಕ್ಷ್ಮಣ ಸವದಿ ಪ್ರತಿಕ್ರಿಯೆ

ಹುಬ್ಬಳ್ಳಿಯಲ್ಲಿ ಲಕ್ಷ್ಮಣ ಸವದಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು ಜೆ ಪಿ ಸಿ ಆಗಮನ ಹಿನ್ನೆಲೆ ಚುನಾವಣೆ ಸಿದ್ಧತೆಗಾಗಿ ಅವರು ಬಂದಿರೋದ ಇದು ಒಳಗಡೆಯ ವಿಷಯ ಹೇಳ್ತಿರೋದು ಅವರು ಬಂದಾಗ ಅಹವಾಲು ತಗೋಳೋದು, ಕೊಡೋದರಲ್ಲಿ ತಪ್ಪಿಲ್ಲ‌.

ಮೂರು ಕ್ಷೇತ್ರದಲ್ಲಿ ಗೆಲ್ಲಬೇಕು ಅಂತ ನಮಗೂ ಇದೆ ಅವರಿಗೂ ಇದೆ. ಐದು ಗ್ಯಾರಂಟಿ ಕೊಟ್ಟಿದ್ದೇವೆ, ಜನರಿಗೆ ಮುಟ್ಟಿದೆ. ಹೀಗಾಗಿ ಗೆಲ್ಲುವ ಆತ್ಮವಿಶ್ವಾಸ ನಮಗಿದೆ, ಗೆಲ್ತಿವೆ.

ಸರ್ಕಾರ ಉಳಿಯಲ್ಲ ಎಂದವರಿಗೆ ಗಾಳಿಯಲ್ಲಿ ಗುಂಡು ಹಾರಿಸ್ತಾರೆ ಎಂದ ಸವದಿ ಸರ್ಕಾರ ರಚನೆ ಆದಾಗಿಂದ ಇದನ್ನೇ ಹೇಳ್ತಾರೆ ಇನ್ನು ಮೂರುವರೆ ವರ್ಷ ಅದನ್ನೇ ಹೇಳ್ತಾರೆ.

ಬಿಜೆಪಿಯದು ಮನೆಯೊಂದು ಆರು ಬಾಗಿಲಾಗಿದೆ ಮುರಿದದ್ದು ಆರು ಆಗಿದೆ, ಹೇಳುವವರಿಲ್ಲ ಕೇಳುವವರಿಲ್ಲ ದಿನೇ ದಿನೇ ಬಿಜೆಪಿ ಕೆಟ್ಟು ಹೋಗ್ತಿದೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ನಶಿಸಿ ಹೋಗುತ್ತೆ.

ಬಿಜೆಪಿಯಿಂದ ಕಾಂಗ್ರೆಸ್ ಗೆ ಬರುವವರು ಇದ್ದಾರೆ ಅವರಿಗೆ ಭರವಸೆ ಕೊಡದೆ ಕರೆದುಕೊಳ್ಳಲು ಆಗೋದಿಲ್ವಲ್ಲ ಎಂದ ಶಾಸಕ ಲಕ್ಷ್ಮಣ ಸವದಿ.