ಉ.ಕ ಸುದ್ದಿಜಾಲ ಚಿಕ್ಕೋಡಿ :

ರೈತರಿಗೆ ಮೇಲಿಂದ ಮೇಲೆ ಕಷ್ಟಗಳು ಎದುರಾಗತ್ತಲೇ ಇವೆ. ಇಂತಹ ಸನ್ನಿವೇಶದಲ್ಲಿ ಮತ್ತೊಂದು ಬರೆ ಎಳೆಯುವ ಪ್ರಸಂಗ ರೈತರಿಗೆ  ಎದುರಾಗಿದೆ. ನೆರೆ ಹಾವಳಿಯಿಂದ ಅಳಿದುಳಿದು ಕಬ್ಬಿನ ಬೆಳೆಗೆ ಈಗ ಸೂಲಂಗಿ ಬಂದಿದ್ದು, ಕಬ್ಬು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಬ್ಬು ಕಟಾವು ಮಾಡಲು ಬರದ ಕಾರ್ಮಿಕರ ಹಿನ್ನಲೆ  ಕಬ್ಬು ಬೆಳೆಗಾರರು ತೊಂದರೆ ಅನುಭವಿಸುವ ಪ್ರಸಂಗ ಎದುರಾಗಿದೆ.

ಹೀಗೆ ಎಲ್ಲಿ ನೋಡಿದರಲ್ಲಿ ಕಬ್ಬಿನ ಬೆಳೆ, ಕಬ್ಬಿನ ಬೆಳೆಗೆ ಸೂಲಂಗಿ (ಕಬ್ಬಿನ ಗರಿ) ಕೆಳಗೆ ಒಣಗಿದ ಕಬ್ಬು, ಇಂತಹ ಕಬ್ಬಿನ ಬೆಳೆ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಪ್ರತಿ ಗ್ರಾಮದಲ್ಲೂ ಸಹ ಕಬ್ಬಿನ ಬೆಳೆಗೆ ಸೂಲಂಗಿ ಬಂದಿದ್ದು, ರೈತರು ಕಷ್ಟ ಅನುಭವಿಸುವ ಪ್ರಸಂಗ ಎದುರಾಗಿದೆ.‌ ಮಂಡ್ಯ ಜಿಲ್ಲೆಯನ್ನು ಹೊರತು ಪಡಿಸಿದರೆ ಅತಿ ಹೆಚ್ಚಾಗಿ ಕಬ್ಬು ಬೆಳೆಯನ್ನು ಬೆಳಗಾವಿ ಜಿಲ್ಲೆಯ ರೈತರು ಬೆಳೆಯುತ್ತಾರೆ.

ಇನ್ನೇನು ಬೆಳೆದ ನಿಂತ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಕಳಿಸಿ ಮಾಡಿದ ಸಾಲವನ್ನ ತೀರಿಸಬೇಕೆನ್ನುವ ಚಿಂತೆಯಲ್ಲಿರುವ ರೈತನಿಗೆ ಕಬ್ಬು ಕಟಾವು ಮಾಡಿಸುವುದೇ ಒಂದು ಚಿಂತೆಗಿಡಾಗಿದೆ. ಕೃಷ್ಣಾ ನದಿ ತೀರದಲ್ಲಿ ಇರುವಂತ ನೂರಾರು ಎಕರೆ ಬೆಳೆದು ನಿಂತಿದ್ದ ಕಬ್ಬು ಬೆಳೆಗೆ ಅತಿಯಾದ ಮಳೆ ಹಾಗೂ ಪ್ರವಾಹದಿಂದ ಕಬ್ಬಿನ ಬೆಳೆಗೆ ಈಗ ಸೂಲಂಗಿ (ಕಬ್ಬಿನ ಗರಿ) ಬೆಳೆಯುತ್ತಿರುವುದರಂದ ಬೆಳೆದ ಕಬ್ಬು ಬೆಂಡೊಡೆಯುತ್ತಿದೆ. ಬೆಳೆದ ಕಬ್ಬಿನಲ್ಲಿ ಈಗ ತೂಕ ಕಡಿಮೆಯಾಗುತ್ತಿದೆ. ಇದರಿಂದ ಮತ್ತೆ ನದಿ ತೀರದ ರೈತ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಬ್ಬು ನಾಟಿ ಮಾಡಿದ 11 ತಿಂಗಳ ಬಳಿಕ ಸೂಲಂಗಿ ಬರುತ್ತದೆ. ಈ ಸೂಲಂಗಿ ಬರುವುದರಿಂದ ಕಬ್ಬಿನ ಇಳುವರಿ ಹಾಗೂ ತೂಕದಲ್ಲಿ ಕಡಿಮೆಯಾಗುತ್ತಿದೆ. ಈ ಸೂಲಂಗಿ ಬರುವಷ್ಟರಲ್ಲಿ ಸಕ್ಕರೆ ಕಾರ್ಖಾನೆಯವರು ಕಬ್ಬನ್ನು ಕಟಾವು ಮಾಡಿ ಕಾರ್ಖಾನೆಗೆ ಒಯ್ಯಬೇಕು ಆದರೆ, ಕಬ್ಬು ಕಟಾವು ಮಾತ್ರ ಆಗುತ್ತಿಲ್ಲ. ಸಕ್ಕರೆ ಕಾರ್ಖಾನೆಯ ಅಧಿಕಾರಿಗಳ ಮಲತಾಯಿ ಧೊರಣೆಯಿಂದ ಇಂದು ರೈತರು ಕಷ್ಟ ಅನುಭವಿಸುವ ಪ್ರಸಂಗ ಎದುರಾಗಿದೆ.

ಒಂದು ಎಕರೆಗೆ 50 ರಿಂದ 60 ಟನ್ ಕಬ್ಬಿಣ ಫಸಲು ಸಿಗುತ್ತಿದ್ದರೆ ಸೂಲಂಗಿ ಬಂದಾಗ 30 ರಿಂದ 40 ಟನ್ ಮಾತ್ರ ಇಳುವರಿ ಸಿಗುವ ಸಾಧ್ಯತೆ ಇದೆ. ಸೂಲಂಗಿ ಕಬ್ಬು ಕಟಾವಿಗೆ ಕಾರ್ಮಿಕರು ಹೆಚ್ಚಿನ ದರ ಬೇಡುತ್ತಾರೆ. ಅಲ್ಲದೇ ಸೂಲಂಗಿ ಕಬ್ಬು ಮೇವಿಗೂ ಬರುವುದಿಲ್ಲ. ಇದು ಕೂಡ ರೈತರ ಆರ್ಥಿಕ ಹಾನಿ ಹೆಚ್ಚಿಸುತ್ತದೆ. ಸೂಲಂಗಿ ಬೆಳೆ ಬಿಸಲಿನ ತಾಪಕ್ಕೆ ಬೆಂಕಿ ಹತ್ತುತ್ತವೆ. ಇದರಿಂದ ಕಬ್ಬಿನ ಬೆಳೆಗೆ ಬೆಂಕಿ ಹತುವುದರಿಂದ ಬೆಳೆದ ಬೆಳೆಗಳೆಲ್ಲವೂ ಬೆಂಕಿಗಾಹುತಿ ಆಗುವ ಸಾಧ್ಯತೆ ಹೆಚ್ಚು.

ಸಕ್ಕರೆ ಕಾರ್ಖಾನೆಯವರು ಒಂದು ಕಡೆ ತೊಂದರೆ ನೀಡಿದರೆ ಇನ್ನೊಂದು ಕಡೆ ಕಬ್ಬು ಕಟಾವು ಮಾಡುವ ಕಾರ್ಮಿಕರ ತೊಂದರೆ ಒಂದು ಸಾರಿಗೆ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಹೋಗ ಬೇಕಾದರೆ ಕಾರ್ಮಿಕರಿಗೆ ಚಾಪಾನಿ ನೆಪದಲ್ಲಿ ಒಂದು ಸಾರಿಗೆ ಕಬ್ಬಿಗೆ ಸುಮಾರು ಎರಡರಿಂದ ಮೂರು ಸಾವಿರ ಹೆಚ್ಚಿನ ಹಣ (ಚಹಾಪಾನಿ) ಕೊಡಬೇಕು.

ಅಂದರೆ ಒಂದು ಟನ್ ಕಬ್ಬಿನ ಬೆಲೆಯನ್ನು ಕಾರ್ಮಿಕರಿಗೆ ನೀಡಿವಂತ ಪರಸ್ಥಿತಿ ನಿರ್ಮಾಣವಾಗಿದ್ದು ಇದಕ್ಕೆ ಸಂಬಂಧಪಟ್ಟ ಸಕ್ಕರೆ ಕಾರ್ಖಾನೆಗಳು ನಿಗಾ ವಹಿಸಿ ಸೀರಿಯಲ್ಲ ಪ್ರಕಾರ ಕಬ್ಬು ಕಟಾವು ಮಾಡಿಸಬೇಕೆಂದು ಯುವ ರೈತ ಅರುಣ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ‌ ಮಾಡಿದ ಸಾಲವನ್ನ ತೀರಿಸಿ ನಿಸ್ಕಾಲಜಿ ಇಂದ ಇರಬೇಕೆನ್ನುವ ರೈತರಿಗೆ ಕಾರ್ಮಿಕರ ತೊಂದರೆಯಿಂದಾಗಿ ಬೆಳೆದು ನಿಂತ ಕಬ್ಬನ್ನು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ, ಸಕ್ಕರೆ ಕಾರ್ಖಾನೆಯವರ ಬೇಜವ್ದಾರಿತನ ಹಾಗೂ ಮಲತಾಯಿ ಧೋರಣೆಯಿಂದ ಚಿಕ್ಕೋಡಿ ಉಪವಿಭಾಗದ ರೈತರು ತೊಂದರೆ ಅನುಭವಿಸುವಂತಾಗಿದೆ. ಈಗಲಾದರೂ ಸಕ್ಕರೆ ಕಾರ್ಖಾನೆ ಅಧಿಕಾರಿಗಳಿ ಬೆಳೆದ ಕಬ್ಬಿನ ಬೆಳೆಯನ್ನು ಆದಷ್ಟು ಬೇಗ ಕಟಾವೂ ಮಾಡಿ ಕಾರ್ಖಾನೆಗೆ ಸಾಗಾಣಿಕೆ ಮಾಡಬೇಕೆನುವುದು ರೈತರ ಬೇಡಿಕೆ ಆಗಿದೆ.