ಮೂಡಲಗಿ :

ಅನಾರೋಗ್ಯದಿಂದ ಯೋಧ ಸಾವು, ಸ್ವಗ್ರಾಮದಲ್ಲಿ ನೆರವೇರಿದ ಅಂತ್ಯಕ್ರಿಯೆ ಮಾಡಿರುವ ಘಟನೆಯೊಂದು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದೆ.

ಯಾದವಾಡ ಗ್ರಾಮದ ಯೋಧ ಚಂದ್ರಶೇಖರ್ ದಲಾಲ್ (32) ಮೃತ ಯೋಧ. ಇತ ಹೈದರಾಬಾದನ NSG( ರಾಷ್ಟ್ರೀಯ ಭದ್ರತಾ ದಳ) ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರಜೆಗೆಂದು ಕಳೆದ ಒಂದು ತಿಂಗಳ ಹಿಂದೆ ಸ್ವಗ್ರಾಮಕ್ಕೆ ಆಗಮಿಸಿದ ಯೋಧ ಚಂದ್ರಶೇಖರ್ ಅನಾರೋಗ್ಯದಿಂದ ಬಳಲುತ್ತಿದ್ದ. ನಿನ್ನೆ ತಡ ರಾತ್ರಿ ಮನೆಯಲ್ಲೆ ಸಾವನಪ್ಪಿದ್ದಾನೆ.

ಯೋಧನ ಪಾರ್ಥಿವ ಶರೀರವನ್ನು ಮೆರವಣಿಗೆಯೊಂದಿಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಯೋಧನ ಸಾವಿನಿಂದ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ. ಯೋಧನ ಅಂತಿಮ ದರ್ಶನ ಪಡೆದುಕೊಂಡ ಯಾದವಾಡ ಗ್ರಾಮಸ್ಥರು. ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ಯಾದವಾಡ ಗ್ರಾಮದಲ್ಲಿ ನಡೆಯಿತು.