ಉ.ಕ ಸುದ್ದಿಜಾಲ ಬೆಳಗಾವಿ :

ಬಿಜೆಪಿ ಹೈಕಮಾಂಡ್‌ ವಿರುದ್ಧ ಸಿಟ್ಟು ಹೊರಹಾಕಿದ ರಾಜ್ಯಸಭೆ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಗೆ ಹೈಕಮಾಂಡ್‌ ನಾಯಕರ ನಿರ್ಧಾರಗಳೇ ಕಾರಣ. ರಾಮದುರ್ಗದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಡಾ. ಪ್ರಭಾಕರ ಕೋರೆ ಅಸಮಾಧಾನ.

ಜಗದೀಶ್ ಶೆಟ್ಟರ್, ಮಹಾದೇವಪ್ಪ ಯಾದವಾಡರಂಥ ನಾಯಕರಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ. ಈ ಕಾರಣಕ್ಕೆ ‌ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ‌ಬರಲಿಲ್ಲ. ಅಧಿಕಾರಕ್ಕೆ ಬರದೇ ಇರುವುದು ನಮ್ಮೆಲ್ಲರ ದುರ್ದೈವ ಎಂದು ಕೋರೆ ಆಕ್ರೋಶದ ನುಡಿದಿದ್ದಾರೆ.

ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕದಲ್ಲೇ ಬಿಜೆಪಿ ಸಂಘಟನೆಗೆ ಶ್ರಮಿಸಿದ್ದವರು. ಆರು ಸಲ ಶಾಸಕರಾಗಿ ಸಿಎಂ, ಪ್ರತಿಪಕ್ಷ ‌ನಾಯಕ, ರಾಜ್ಯಾಧ್ಯಕ್ಷ ಹೀಗೆ ಎಲ್ಲ ಹುದ್ದೆಗಳನ್ನು ನಿಭಾಯಿಸಿದ್ದರು. ಜನಸಂಘ ಕಾಲದಿಂದಲೂ ‌ಜಗದೀಶ ಶೆಟ್ಟರ್ ‌ಕುಟುಂಬ ಬಿಜೆಪಿ ಜೊತೆಗೇ ಇದೆ.

ಹೀಗಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಇಂಥ ನಾಯಕರಿಗೆ ಟಿಕೆಟ್ ಕೊಡಲಿಲ್ಲ. ರಾಜ್ಯದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಾರದಿರುವುದೇ ಇದಕ್ಕೆ ಕಾರಣ ‌ಎಂದ ಪ್ರಭಾಕರ ಕೋರೆ.