ಉ.ಕ‌ಸುದ್ದಿಜಾಲ ಗೋಕಾಕ :

ಬೆಳಗಾವಿ‌ ಜಿಲ್ಲೆಯ ಸಮೀಪದ ಗೋಕಾಕ‌ ತಾಲೂಕಿನ ಅರಭಾವಿ ಗ್ರಾಮದ ದುರದುಂಡೇಶ್ವರ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ (75) ಭಾನುವಾರ ಲಿಂಗೈಕ್ಯರಾದರು.

ರಾತ್ರಿ ಪೂಜೆಗೆ ಸಿದ್ಧತೆ ನಡೆಸಿದ ವೇಳೆ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಶ್ರೀಗಳು ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾಗಿ ವೈದ್ಯರು ತಿಳಿಸಿದರು ಎಂದು ಮಠದ ಮೂಲಗಳು ತಿಳಿಸಿವೆ.

ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿಯಲ್ಲಿ ಜನಿಸಿದ ಶ್ರೀಗಳು, 1977ರಲ್ಲಿ ಈ ಮಠದ ಪೀಠ ಅಲಂಕರಿಸಿದ್ದರು. ಅವರ ಪೂರ್ವಾಶ್ರಮದ ತಂದೆಯ ಹೆಸರು ಶಿವಯ್ಯ, ತಾಯಿಯ ಹೆಸರು ಶಿವಮ್ಮ. ಈ ಮಠದ 11ನೇ ಪೀಠಾಧಿಪತಿ ಇವರಾಗಿದ್ದರು ಎಂದು ಮಠದ ಭಕ್ತರು ತಿಳಿಸಿದ್ದಾರೆ.