ಉ.ಕ ಸುದ್ದಿಜಾಲ ಮೋಳೆ :
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ವಾರ್ಡ ನಂಬರ ಒಂದಕ್ಕೆ ಸುಮಾರು ಎಂಟು ಲಕ್ಷ ಕಾಮಗರಿಗೆ ಸೋಮವಾರ ಗ್ರಾಮ ಪಂಚಾಯತಿ ಅಧ್ಯಕ್ಷ ಬೂತಾಳಿ ಥರಥರೆ ಗುದ್ದಲಿ ಪೂಜೆ ನೆರವೆರಿಸಿದರು.
ಮೋಳೆ ಗ್ರಾಮದ ವಾರ್ಡ ನಂಬರ ಒಂದರಲ್ಲಿ ಮೂರು ಚರಂಡಿ ಹಾಗೂ ಒಂದು ಸಿಸಿ ರಸ್ತೆ ನಿರ್ಮಾಣಕ್ಕೆ ಗ್ರಾಮ ಪಂಚಾಯತಿ 15 ನೇ ಹಣಕಾಸು ಹಾಗೂ ನಿರ್ಮಿತಿಯಿಂದ ಸುಮಾರು ಎಂಟು ಲಕ್ಷ ಅನುದಾನ ಬಿಡುಗಡೆಯಾಗಿದ್ದು ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಲಾಯಿತು.
ಈ ಸಂಧರ್ಭದಲ್ಲಿ ವಾರ್ಡ ಒಂದರ ಸದಸ್ಯರಾದ ಸಿದ್ದು ಹವಳೆ, ಸುಕುಮಾರ ಮಲ್ಲುಖಾನ, ಬೂಪಾಲ ಕೌಲಗಿ, ಗ್ರಾ.ಪಂ ಸದಸ್ಯರಾದ ಗುರು ಕಡಕೋಳ, ಬಸು ಮುದವಿ, ವಿದ್ಯಾನಂದ ತೇಲಿ, ಮಹಾದೇವ ಕೋಳಿ, ಗುತ್ತಿಗೆದಾರ ಪ್ರಶಾಂತ ಆನದಿನಿ, ಗ್ರಾಮದ ಸುನೀಲ ಕೋಷ್ಟಿ, ಪ್ರಶಾಂತ ಮಿರ್ಜೆ, ರಾಮು ಮಲ್ಲುಖಾನ, ಸುದೀಪ ಜಿರಗಾಳೆ ಉಪಸ್ಥಿತರಿದ್ದರು.