ಉ.ಕ ಸುದ್ದಿಜಾಲ ಚಿಕ್ಕೋಡಿ :
ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ಚಿಕ್ಕೋಡಿ, ಹುಕ್ಕೇರಿ, ಅಥಣಿ, ರಾಯಭಾಗ, ನಿಪ್ಪಾಣಿ, ಕಾಗವಾಡ ತಾಲೂಕಿನ ಜನಜೀವನ ಅಸ್ತವ್ಯಸ್ತವಾಗಿದೆ.
ಈಗಾಗಲೇ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿದ್ದು, ಕಬ್ಬು ಕಟಾವು ಮಾಡಿದ ರೈತರು ತೊಂದರೆ ಅನುಭವಿಸುವ ಪ್ರಸಂಗ ಎದುರಾಗಿದೆ.
ಹೌದು ಚಿಕ್ಕೋಡಿ ಉಪವಿಭಾಗದಲ್ಲಿ ಹದಿನೈದಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು ಈಗಾಗಲೇ ಕೆಲ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿವೆ. ಆದರೆ, ಸದ್ಯ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರೈತ ತೊಂದರೆ ಅನುಭವಿಸುವ ಪ್ರಸಂಗ ಎದುರಾಗಿದೆ.
ಈಗಾಗಲೇ ಅಕ್ಟೋಬರ ಮೊದಲ ವಾರದಲ್ಲಿ ಹಿಂಗಾರು ಬಿತ್ತನೆ ಪ್ರಾರಂಭವಾಗುತ್ತವೆ ಹೀಗಾಗಿ ರೈತರು ಕೂಡಾ ತಮ್ಮ ಕಬ್ಬನ್ನು ಕಟಾವು ಮಾಡಿದ ಬಳಿಕ ಜಮೀನುಬತಯಾರು ಮಾಡಿ ಹಿಂಗಾರು ಬೆಳೆ ಬೆಳೆಯುವ ಲೆಕ್ಕಾಚಾರದಲ್ಲಿದ್ದರು.
ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಟಾವು ಮಾಡಿದ ರೈತರಿಗೆ ಹಾಗೂ ಕಬ್ಬು ಸಾಗಾಣಿಕೆ ಮಾಡುವ ಟ್ರ್ಯಾಕ್ಟರ ಮಾಲೀಕನಿಗೆ ತೊಂದರೆಯಾಗಿದ್ದು ಜಮೀನಿನಲ್ಲಿ ಸಿಕ್ಕ ಹಾಕಿಕೊಂಡಿರುವ ಟ್ರೈಲರಗಳನ್ನ ತೆಗೆಯಲು ಹರಸಾಹಸ ಪಡುವಂತಾಗಿದೆ.