ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಜಿಲ್ಲೆಯ ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದ ಮೇಲೆ ಇಬ್ಬರು ಪೊಲೀಸ್ ಪೇದೆ ಅಮಾನತು ಮಾಡಿ ಆದೇಶ ಹೊರಡಿಸಿದ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ.
ಮಾರಿಹಾಳ ಪೊಲೀಸ್ ಠಾಣೆಯ ಮುಖ್ಯಪೇದೆ ಬಿ ಎಸ್ ಬಳಗಣ್ಣವರ್, ಪೇದೆ. ಆರ್ ಎಸ್ ತಳೆವಾಡೆ ಅಮಾನತು. ಅಕ್ಟೋಬರ್ 6 ರಂದು ರಾತ್ರಿ ಎರಡು ಗ್ಯಾಂಗ್ ಗಳ ನಡುವೆ ಮಾರಾಮಾರಿ. ಬೆಳಗಾವಿಯ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ನಡೆದಿದ್ದ ಗ್ಯಾಂಗ್ ವಾರ್. ಈ ವೇಳೆ ಮಹೇಶ್ ಮುರಾರಿ, ಪ್ರಕಾಶ್ ಹುಂಕರಿ ಪಾಟೀಲ್ ಇಬ್ಬರ ಹತ್ಯೆಯಾಗಿತ್ತು.
ಘಟನೆಗೂ ಮುನ್ನ ದಿನವೇ ಈ ಗ್ಯಾಂಗ್ ನಡುವೆ ಗಲಾಟೆಯಾಗಿತ್ತು. ಈ ವಿಚಾರ ಗೊತ್ತಿದ್ರೂ ಮೇಲಾಧಿಕಾರಿಗಳ ಗಮನಕ್ಕೆ ತರದೇ ಬೇಜವಾಬ್ದಾರಿ ತೋರಿದ್ದ ಅಮಾನತಾದ ಪೊಲೀಸರು. ಈ ಹಿನ್ನೆಲೆ ಇಬ್ಬರು ಪೇದೆಗಳನ್ನ ಅಮಾನತು ಮಾಡಿದ ಕಮೀಷನರ್.