ಉ.ಕ ಸುದ್ದಿಜಾಲ ಹುಕ್ಕೇರಿ :

ಜಮ್ಮುವಿನ ಶ್ರೀನಗರದಲ್ಲಿ 55 ಆರ್ ಆರ್ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಯೋಧ ಶಿವಾನಂದ ಬಾಬು ಶಿರಗಾಂವಿ (42) ಹೃದಯಾಘಾತದಿಂದ ಸಾವನ್ನಪ್ಪಿದಾರೆ.

ಶುಕ್ರವಾರ ಸಾಯಂಕಾಲ ಅಥವಾ ಶನಿವಾರ ಶಿವಾನಂದ ಮೃತ ದೇಹ ಸ್ವಗ್ರಾಮ ಬಡಕುಂದ್ರಿ ಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಯೋಧನ ಸಾವಿನಿಂದ ಸ್ವಗ್ರಾಮ ಬಡಕುಂದ್ರಿಯಲ್ಲಿ ಮಡುಗಟ್ಟಿದ ಶೋಕ.

ಮೃತ ಯೋಧ ಶಿವಾನಂದ ಅವರು ಪತ್ನಿ, ಎರಡು‌ ಮಕ್ಕಳು, ತಾಯಿ ಹಾಗೂ ಅಪಾರ ಬಂಧುಗಳನ್ನ ಹೊಂದಿದ್ದರು, ಯೋಧ ಶಿವಾನಂದ ಸಾವಿನಿಂದ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.