ಉ.ಕ ಸುದ್ದಿಜಾಲ ಕಾಗವಾಡ :
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿರುವ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಸನ್ 2022-23 ನೇ ಕಬ್ಬು ನುರಿಸುವ ಹಂಗಾಮಿಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಶುಭ ಮಹೂರ್ತದಲ್ಲಿ ಕಾರ್ಖಾನೆಯ ಅಧ್ಯಕ್ಷರು ಹಾಗೂ ಕಾಗವಾಡ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀಮಂತ ಪಾಟೀಲ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿದರು ಕಳೆದ ವರ್ಷ ಸನ್ 2021-22 ನೇ ಸಾಲಿನಲ್ಲಿ ನಮ್ಮ ಕಾರ್ಖಾನೆಗೆ ರೈತ ಬಾಂಧವರು ಸುಮಾರು 17 ಲಕ್ಷ ಟನ್ ಕಬ್ಬು ನೀಡಿ ಸಹಕರಿಸಿ, ವಿಶೇಷ ದಾಖಲೆ ನಿರ್ಮಿಸಲು ಕಾರಣಿಭೂತರಾಗಿದ್ದೀರಿ. ಅದೇ ಪ್ರಕಾರ ನಾವು ರೈತರಿಗೆ ಪ್ರತಿ ಟನ್ ಗೆ 2700 ರೂ. ರಂತೆ ದರವನ್ನು ನೀಡಿದ್ದೇವು.
ಈ ಸನ್ 2022 – 23 ನೇ ಸಾಲಿನ ಹಂಗಾಮಿನಲ್ಲಿ ನಮ್ಮ ಕಾರ್ಖಾನೆಯೂ 20 ಲಕ್ಷ ಟನ್ ಕಬ್ಬು ನುರಿಸುವ ಉದ್ದೇಶವನ್ನು ಹೊಂದಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಟನ್ ಗೆ ರೂ. 2800/- ರಂತೆ ದರವನ್ನು ನೀಡಲು ಸಿದ್ಧರಾಗಿರುವುದಾಗಿ ಹೇಳಿದರು. ರೈತ ಬಾಂಧವರು ನಮ್ಮ ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಕಬ್ಬನ್ನು ಪೂರೈಸಿ ಸಹಕರಿಸುವಂತೆ ಶ್ರೀನಿವಾಸ ಪಾಟೀಲ ಮನವಿ ಮಾಡಿಕೊಂಡರು.
ಈ ಸಮಯದಲ್ಲಿ ಅಥಣಿ ಶುಗರ್ಸ್ ಲಿಮಿಟೆಡ್‌ನ ಅಧ್ಯಕ್ಷರು ಹಾಗೂ ಕಾಗವಾಡ ಶಾಸಕರಾದ ಶ್ರೀಮಂತ ಬಾಳಾಸಾಹೇಬ ಪಾಟೀಲ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ, ಕಾರ್ಯನಿರ್ವಾಹಕ ನಿರ್ದೇಶಕ ಯೋಗೇಶ ಪಾಟೀಲ, ಸುಶಾಂತ ಪಾಟೀಲ, ಅಬ್ದುಲಬಾರಿ ಮುಲ್ಲಾ ಹಾಗೂ ಕಾರ್ಖಾನೆಯ ನಿರ್ದೇಶಕ ಮಂಡಳಿಯ ಸದಸ್ಯರು, ಸ್ಥಳೀಯ ಮುಖಂಡರು, ಸಾವಿರಾರು ಸಂಖ್ಯೆಯಲ್ಲಿ ರೈತರು, ಕಾರ್ಖಾನೆಯ ವಿವಿಧ ಇಲಾಖೆಯ ಅಧಿಕಾರಿ ವರ್ಗ, ಸಿಬ್ಬಂದಿಗಳು ಕಾರ್ಮಿಕರು ಅಪಾರ ಸಂಖ್ಯೆಯಲ್ಲಿ ಇದ್ದರು.