ಉ.ಕ ಸುದ್ದಿಜಾಲ ಹುಕ್ಕೇರಿ :
ಖರ್ತಾನಕ್ ಸುಪಾರಿ ಕಿಲ್ಲರ್ ಗ್ಯಾಂಗ್ ಅರೆಸ್ಟ್ : ಒಂದೇ ಊರಿನ ಮೂವರ ಹತ್ಯೆ ಒಂದೇ ಊರಿನ ಮೂವರ ಹತ್ಯೆ ಮಾಡಿ ಬಿಂದಾಸ್ ಆಗಿ ಓಡಾಡ್ತಿದ್ದ ಆರೋಪಿಗಳು ಅಂದರ್. ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸರಿಂದ ಭರ್ಜರಿ ಬೇಟೆ.
ಒಂದೇ ಊರಿನ ಮೂವರ ಹತ್ಯೆ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೆದ ಮಾಹಿತಿ
ಇನ್ಸ್ಪೆಕ್ಟರ್ ಜಾವೇದ್ ಮುಶಾಪುರಿ ತಂಡದಿಂದ ಸುಪಾರಿ ಗ್ಯಾಂಗ್ ಬಂಧನ. ಒಂದು ಕೊಲೆ ಕೇಸ್ ಬೆನ್ನುಬಿದ್ದ ಪೊಲೀಸರಿಗೆ ಮತ್ತೆರಡು ಮರ್ಡರ್ ಕೇಸ್ ಪತ್ತೆ. ಎರಡು ಅನೈತಿಕ ಸಂಬಂದ ಮುಚ್ಚಿಹಾಕುಲು ಪತ್ನಿಯರೇ ಸುಪಾರಿ ಕೊಟ್ಟರೆ. ಮತ್ತೊಂದು ಪ್ರಕರಣದಲ್ಲಿ ಹಣಕಾಸಿನ ವಿಚಾರಕ್ಕೆ ಸಹೋದರ ಸುಪಾರಿ ಕೊಟ್ಟಿರುವುದು ಬೆಳಕಿಗೆ.
ಸುಪಾರಿ ಕಿಲ್ಲರಗಳಾದ ಹುಕ್ಕೇರಿ ತಾಲೂಕಿನ ಹಟ್ಟಿಹೊಳಿ ಆಲೂರಿನ ಆಕಾಶ ಗೋಕಾವಿ, ಸ್ನೇಹಿತ ರಮೇಶ್ ಮಾಳಗಿ ಮತ್ತು ಪಾಶ್ಚಾಪುರದ ಅಣ್ಣಪ್ಪ ನಾಯಿಕ ಅರೆಸ್ಟ್. 2024 ರಲ್ಲಿ ಪತ್ನಿ ಮಾಲಾ 70 ಸಾವಿರ ರೂಪಾಯಿಗೆ ಪತಿ ಮಹಾಂತೇಶ ಸುಟಗನ್ನವರ ಕೊಲೆ ಮಾಡಿಸಿದ್ದಳು. ಗಂಡನ ಕಿರುಕುಳ ತಾಳಲಾರದೆ ಪತ್ನಿ ಮಾಲಾ 70 ಸಾವಿರ ರೂಪಾಯಿಗೆ ಸುಪಾರಿ ಕೊಟ್ಟಿದ್ದಳು.
ಇದಕ್ಕೂ ಮೊದಲು 2022ರಲ್ಲಿ ಪತ್ನಿ ಯಲ್ಲವ್ವ ಸುಪಾರಿ ಕೊಟ್ಟು ಪತಿ ನಾಗಪ್ಪ ಮರೆಪ್ಪಗೋಳ ಕೊಲೆ ಮಾಡಿದ್ರು. ಯಲ್ಲವ್ವ ಮಾಳಗಿ ಅನೈತಿಕಕ್ಕೆ ಅಡ್ಡಿಯಾಗಿದ್ದಕ್ಕೆ 3ಲಕ್ಷ ನೀಡಿ ಗಂಡನ ಕೊಲೆ ಮಾಡಿಸಿದ್ದಳು. ಸುಪಾರಿ ಗ್ಯಾಂಗ್ ನ ಎ2 ಆರೋಪಿ ರಮೇಶ್ ನಿಂದ ಅಣ್ಣನ ಕೊಲೆ.
2023ರಲ್ಲಿ ರಮೇಶ್‌ನ ಜಮೀನನ್ನ 22 ಲಕ್ಷ ರೂಪಾಯಿಗೆ ಅಡವಿಟ್ಟಿದ್ದಕ್ಕೆ ತನ್ನ ಗ್ಯಾಂಗ್ ನೊಂದಿಗೆ ಸೇರಿ ಸ್ವಂತ ಅಣ್ಣನ ಕೊಲೆ. ಮೂರು ಕೊಲೆಯನ್ನ ಸುಪಾರಿ ಕಿಲ್ಲರ್ ಗಳು ಒಂದೇ ಟ್ರಿಕ್ ಉಪಯೋಗ. ಕುಂದರಗಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಕೊಲೆಯಾದವರಿಗೆ ಸಾರಾಯಿ ಕುಡಿಸಿ ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆ.
ಸುಪಾರಿ ಕಿಲ್ಲರ್ ಗಳು ಕೊಲೆ ಮಾಡಿ ಸಹಜ ಸಾವು ಎಂಬಂತೆ ಬಿಂಬಿಸುವಲ್ಲಿ ಯಶಸ್ವಿಯಾಗಿದ್ದರು. ಮಾಲಾ ತನ್ನ ಪತಿ ಮಹಾಂತೇಶ್ ಕುಡಿದು ಸತ್ತಿದ್ದಾನೆ ಎಂಬಂತೆ ಬಿಂಬಿಸಿ ಶವವನ್ನ ಸುಟ್ಟು ಹಾಕಿದ್ರು. ಸುಪಾರಿ ಗ್ಯಾಂಗ್ ನ ಎ2 ಆರೋಪಿ ರಮೇಶ್ ಸಹ ತನ್ನ ಸಹೋದರ ವಿಠ್ಠಲ್‌ನ ಕೊಂದು ಬೈಕ್ ಆ್ಯಕ್ಸಿಡೆಂಟ್ ಅಂತಾ ಬಿಂಬಿಸಿ ಸುಟ್ಟು ಹಾಕಿದ್ದ.
ನಾಗಪ್ಪ ಮಾನಸಿಕ ಖಿನ್ನತೆಯಿಂದ ರೇಲ್ವೆ ಹಳಿಗೆ ಹಾರಿ ಆತ್ಮಹತ್ಯೆ ಅಂತಾ ಬಿಂಬಿಸಿದ್ದ ಪತ್ನಿ ಯಲ್ಲವ್ವ. ಕೊಲೆಯಾದ ಮಹಾಂತೇಶ್ ಸಹೋದರ ಕಲ್ಲಪ್ಪ ಸುಟಗನ್ನವರ ದೂರು. ಆತನ ದೂರು ಆಧರಿಸಿ ತನಿಖೆ ನಡೆಸಿದಾಗ ಮೂರು ಕೊಲೆ ಕೇಸ್ ಬಹಿರಂಗ.
ಕೊಲೆ ಮಾಡಿದ ಮೂವರು ಸುಪಾರಿ ಕಿಲ್ಲರ್, ಸುಪಾರಿ ಕೊಟ್ಟ ಮಾಲಾ, ಯಲ್ಲವ್ವ ಬಂಧನ. ಯಮಕನಮರಡಿ ಪೊಲೀಸರ ಕಾರ್ಯಕ್ಕೆ ಎಸ್ಪಿ ಭೀಮಾಶಂಕರ್ ಗುಳೇದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.