ಉ.ಕ‌ ಸುದ್ದಿಜಾಲ ವಿಜಯಪುರ :

ವಿಜಯಪುರಕ್ಕೆ ಡೆಡ್ಲಿ ಕಳ್ಳರ ಗ್ಯಾಂಗ್ ಎಂಟ್ರಿ, ಕಳ್ಳರ ಗ್ಯಾಂಗ್ ಎಂಟ್ರಿ ಯಿಂದ ಬೆಚ್ಚಿಬಿದ್ದ ಗುಮ್ಮಟನಗರಿ ಮಂದಿ. ರಾತ್ರೋ ರಾತ್ರಿ ಮನೆಗೆ ನುಗ್ಗಿ ದಾಂಧಲೆ ಸೃಷ್ಟಿಸಿದ ಮುಸುಕುಧಾರಿ ಕಳ್ಳರು. ಡೆಡ್ಲಿ ಕಳ್ಳರ ಗ್ಯಾಂಗ್ ಓಡಾಟದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆ..

ಒಂದೇ ವಾರದಲ್ಲಿ ಮೂರು ಕಡೆಗಳಲ್ಲಿ ಮುಸುಕುಧಾರಿಗಳ ಅಟ್ಟಹಾಸ. ತಡರಾತ್ರಿ ಕೈಯ್ಯಲ್ಲಿ ಕೊಡಲಿ, ರಾಡ್, ತಲವಾರ್ ಹಿಡಿದು ಬರ್ತಿರೋ ಮುಸುಕುಧಾರಿ ಗ್ಯಾಂಗ್. ದರೋಡೆಗೆ ಬರೋವಾಗ ತಮ್ಮ ಜೊತೆಗೆ ಗೂಡ್ಸ್ ವಾಹನವನ್ನೆ ತೆಗೆದುಕೊಂಡು ಬರ್ತಾರೆ.

ವಾಹನದಲ್ಲಿ ಹತ್ತಿ ಬಂದು ಒಂಟಿ ಮನೆಗಳ ಮೇಲೆ ದಾಳಿ, ಚಿನ್ನಾಭರಣ ದೋಚಿ ಬಳಿಕ ಪರಾರಿ. ವಿಜಯಪುರ ನಗರದ ಜೈನಾಪೂರ ಲೈಔಟ್‌ನಲ್ಲಿ ಮುಸುಕುಧಾರಿಗಳ ಅಟ್ಟಹಾಸ ಕಂಡು ನಗರದ ಜನರೆ ಕಂಗಾಲು. ದರೋಡೆ ತಡೆಯಲು ಬಂದ ವ್ಯಕ್ತಿಯ ಹೊಟ್ಟೆಗೆ, ಬೆನ್ನಿಗೆ ಚೂರಿ ಹಾಕಿ ಫಸ್ಟ್ ಪ್ಲೋರ್‌ನಿಂದ ಬಿಸಾಕಿದ ದರೋಡೆಕೋರರ ಗ್ಯಾಂಗ್…..

ಚೂರಿ ಇರಿದ ಬಳಿಕವೂ ಸಂತೋಷ್ ಹತ್ಯೆಗೆ ಯತ್ನಿಸಿ ಎಳೆದಾಡಿರೋ ಮುಸುಕುಧಾರಿಗಳು. ಘಟನೆಯ ಬಳಿಕ ಬೆಚ್ಚಿಬಿದ್ದಿರೋ ಜೈನಾಪೂರ ಲೇಔಟ್ ಸೇರಿ ನಗರದ ಜನತೆ. ಮನೆಯ ಸುತ್ತಲೂ ಚೆಲ್ಲಿರುವ ರಕ್ತ….

ರಕ್ತಸ್ರಾವದಿಂದ ವಿಜಯಪುರ ಜಿಲ್ಲಾಸ್ಪತ್ರೆಯ ಐಸಿಯು ನಲ್ಲಿ ದಾಖಲಾಗಿರೋ ಸಂತೋಷ. ಸಂತೋಷ ಕನ್ನೋಳ್ಳಿ ಎಂಬುವರಿಗೆ ಇರಿದು ಪತ್ನಿ ಕೊರಳಲ್ಲಿದ್ದ ಚಿನ್ನದ ತಾಳಿ ಚೈನ್ ಕಿತ್ತೊಯ್ದ ಮುಸುಕುಧಾರಿಗಳು. ಕಿರುಚಾಡಿದಾಗ ಪತ್ನಿಗೂ ಇಟ್ಟಿಗೆಯಿಂದ ಹೊಡೆದ ಮುಸುಕುಧಾರಿಗಳು.

ಪೊಲೀಸರು ಬಂದೋಬಸ್ತ್ ನಲ್ಲಿ ಇರೋವಾಗಲೇ ಅಟ್ಟಹಾಸ ಮೆರೆಯುತ್ತಿರೋ ಮುಸುಕುಧಾರಿ ಗ್ಯಾಂಗ್. ಪೊಲೀಸರು ಕಳೆದ ಅಧಿವೇಶನ ಬಂದೋಬಸ್ತ್ ಡ್ಯೂಟಿಯಲ್ಲಿ ಇದ್ದಾಗಲೂ ಹಿಟ್ನಳ್ಳಿಯಲ್ಲಿ ದಾಂಗುಡಿ ಇಟ್ಟಿದ್ದ ಮುಸುಕುಧಾರಿ ಗ್ಯಾಂಗ್. ಬಳಿಕ ರಾಜ್ ಕುಮಾರ್ ಲೇಔಟ್ ನಲ್ಲಿಯೂ ಸರಣಿಯಾಗಿ ಮನೆಗಳನ್ನ ದೋಚಿದ್ದ ಗ್ಯಾಂಗ್‌..

ಈಗ ಸಿದ್ದರಾಮೇಶ್ವರ ಜಾತ್ರೆಯ ಬಂದುಬಸ್ತಿನಲ್ಲಿ ಪೊಲೀಸರು ಬಿಜಿಯಾಗಿರುವಾಗಲೇ ಮತ್ತೆ ಅಟ್ಟಹಾಸ. ನಗರದ ಹೊರವಯದ ಹೈವೇ ಪಕ್ಕದ ಮನೆಗಳು. ಹೊಸದಾಗಿ ನಿರ್ಮಾಣವಾದ ಲೇಔಟ್‌ಗಳನ್ನೆ ಟಾರ್ಗೆಟ್ ಮಾಡಿಕೊಂಡಿರೋ ಡೆಡ್ಲಿ ಗ್ಯಾಂಗ್.

ನಿನ್ನೆ ಸಿದ್ದರಾಮೇಶ್ವರ ಜಾತ್ರೆಯ ಮದ್ದು ಪ್ರದರ್ಶನದಲ್ಲಿ ಪೊಲೀಸರು ಬ್ಯೂಜಿಯಾಗಿದ್ದಾಗಲೇ ಮುಸುಕುಧಾರಿ ಗ್ಯಾಂಗಿನ ಅಟ್ಟಹಾಸ. ಡೆಡ್ಲಿ ಕಳ್ಳರ ಗ್ಯಾಂಗ್ ನಿಂದ ಕಳೆದ ಹಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಹಲವೆಡೆ ಕಳ್ಳತನ..

ಡೆಡ್ಲಿ ಕಳ್ಳರ ಗ್ಯಾಂಗ್ ಪತ್ತೆಗೆ ಮುಂದಾದಾಗ ಪೊಲೀಸರು. ಪೊಲೀಸ್ ಇಲಾಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಸ್ಥಳೀಯರು.