ಉ.ಕ ಸುದ್ದಿಜಾಲ ಬೆಳಗಾವಿ :

ರಾಜಾಹುಲಿ ಸಿನಿಮಾ ಶೈಲಿಯಲ್ಲಿ ಪ್ಲಾನ್ ಮಾಡಿ ಯುವಕನ‌ ಮರ್ಡರ್ ಕ್ಷುಲ್ಲಕ ಕಾರಣಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಇಬ್ಬರು ಬಾಲಾಪರಾಧಿಗಳು ಸೇರಿ ಒಟ್ಟು 8 ಜನರ ಬಂಧನ ಪ್ರಕಾಶ ಹಿರಟ್ಟಿ (26) ಕೊಲೆಯಾದ ದುರ್ವೈವಿ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹೂಲಿಕಟ್ಟಿ ಗ್ರಾಮದ ಶಿವಲಿಂಗೇಶ್ವರ ಜಾತ್ರೆಗೆ ಹೋಗಿದ್ದ ಕೊಲೆಯಾದ ಪ್ರಕಾಶ. ರವಿಚಂದ್ರ ಪಾತ್ರೋಟ, ಉಮೇಶ ಕಂಬಾರ್, ಮಾರುತಿ ವಡ್ಡರ್, ಅಭಿಷೇಕ್ ಪಾತ್ರೋಟ, ಮನೋಜ್ ಪಾತ್ರೋಟ್, ವಿಜಯ್ ಕುಮಾರ್ ನಾಯಿಕ್ ಸೇರಿ ಇಬ್ಬರು ಬಾಲಾಪರಾಧಿಗಳ ಬಂಧನ ಮಾಡಲಾಗಿದೆ.

ಕಳೆದ ಎರಡು ದಿನಗಳ‌ ಹಿಂದೆ ಗೋಕಾಕ ತಾಲೂಕಿನ ಕೊಳವಿ ಬಳಿ ನಡೆದಿದ್ದ ಘಟನೆ ಪ್ರಕಾಶ ಬರುವುದನ್ನು ಕಾದು ಕುಳಿತಿದ್ದ ಆರೋಪಿಗಳು ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಪ್ರಕಾಶ ಕೊಚ್ಚಿ ಕೊಲೆ ಮಾಡಿದ್ದ ಕೀಚಕರು.

ಪ್ರಕಾಶನ ಚಲನವಲನಗಳ ಬಗ್ಗೆ ಮಾಹಿತಿ ನೀಡಲು ಅಪ್ರಾಪ್ತರನ್ನು ಇನ್ಪರ್ಮ್ ಆಗಿ ಬಳಸಿಕೊಂಡಿದ್ದ ಆರೋಪಿಗಳು ಕೊಲೆ ನಡೆದು ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ ಗೋಕಾಕ ಗ್ರಾಮೀಣ ಪೊಲೀಸರು. ಗೋಕಾಕ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣ.