ಉ.ಕ ಸುದ್ದಿಜಾಲ ಹುಕ್ಕೇರಿ :

ಕಳೆದ ಹದಿನೈದು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಿಡಕಲ್ ಜಲಾಶಯ 41 ಟಿಎಂಸಿ ಭರ್ತಿಯಾದ ಹಿನ್ನಲೆ ಹಿಡಕಲ್ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ, ಗೋಕಾಕ ಹಾಗೂ ಬಾಗಲಕೋಟ ಜಿಲ್ಲೆಗಳ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. 51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯ 41 ಟಿಎಂಸಿ ಭರ್ತಿಯಾಗಿದೆ.

ಘಟಪ್ರಭಾ ನದಿಗೆ ಅಡ್ಡಲಾಗಿರುವ ಹಿಡಕಲ್ ಜಲಾಶಯ 2175 ಅಡಿ ಗರಿಷ್ಠ ಮಟ್ಟ ಇರುವ ಜಲಾಶಯ 2165 ಅಡಿ ಭರ್ತಿ ಶೇ.85 ರಷ್ಟು ಜಲಾಶಯ ಭರ್ತಿ ಹಿನ್ನೆಲೆ ಹಿಡಕಲ್ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ.

32 ಸಾವಿರ ಕ್ಯೂಸೆಕ್ ಗಳಷ್ಟು ಘಟಪ್ರಭಾ ನದಿಗೆ ಒಳ ಹರಿವು ಹಿನ್ನೆಲೆ ನಾಳೆಯಿಂದ ಇನ್ನೂ ಹೆಚ್ಚು ಹೊರಹರಿವು ಮಾಡುವ ಸಾಧ್ಯತೆ ಇದೆ.