ಉ.ಕ ಸುದ್ದಿಜಾಲ ಅಥಣಿ :
ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಸರ್ಕಾರಿ ಬಸ್ ಟ್ಯೂಷನ್ ಗಾಗಿ ಬಂದಿದ್ದ ಮೇಲೆ ಹರಿದ ಬಸ್. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಗಲಗಲಿ ಆಸ್ಪತ್ರೆ ಬಳಿ ಹೃದಯ ವಿದ್ರಾವಕ ಘಟನೆ ನಡೆದಿದೆ.
ಅಥಣಿ ನಿವಾಸಿ ಸುನೀಲ್ ಬಂಡರಗರ್(10) ಬಾಲಕ ಸ್ಥಳದಲ್ಲೇ ಸಾವು. ಟ್ಯೂಷನ್ ಮುಗಿಸಿ ಮೂತ್ರ ವಿಸರ್ಜನೆಗೆ ಗೆಳೆಯರ ಜೊತೆಗೆ ಹೊರ ಬಂದಿದ್ದ ಸುನೀಲ್. ಈ ವೇಳೆ ಗೆಳೆಯರೊಟ್ಟಿಗೆ ರಸ್ತೆ ಬದಿ ನಿಂತಿದ್ದ ಬಾಲಕ.
ಮಕ್ಕಳು ನಿಂತಿದ್ದನ್ನ ಗಮನಿಸುತ್ತಿದ್ರೂ ಬಸ್ ಮಕ್ಕಳ ಮೇಲೆ ತೆಗೆದುಕೊಂಡು ಹೋದ ಚಾಲಕ. ಚಾಲಕನ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ.
ಅಥಣಿಯಿಂದ ಕಾರವಾರ ಹೋಗುತ್ತಿದ್ದ ಸರ್ಕಾರಿ ಬಸ್. ಭೀಕರ ರಸ್ತೆ ಅಪಘಾತ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.