ಉ.ಕ‌ ಸುದ್ದಿಜಾಲ ಕಾಗವಾಡ :

ಗಣೇಶ ಚತುರ್ಥಿ ಹಿಂದೂ- ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಹಬ್ಬ. ಹಿಂದೂ-ಮುಸ್ಲಿಂರು ಸೇರಿ ಗಣೇಶ ಮೂರ್ತಿ ಪ್ರತಿಷ್ಟಾಪನೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬುದ್ರುಕ್ ಗ್ರಾಮದಲ್ಲಿ ಅಣ್ಣ – ತಮ್ಮಂದಿಯರ ಹಾಗೆ ಇರುವ ಹಿಂದೂ – ಮುಸ್ಲಿಂರು.

ಉಗಾರ ಬುದ್ರುಕ್ ಗ್ರಾಮದ ಮೈಉಸ್‌ಬಾಣಿಯ ದರ್ಗಾ ಗಲ್ಲಿಯಲ್ಲಿ ಪ್ರತಿಷ್ಟಾಪಿಸಿ ಭಾವೈಕ್ಯತೆ ಮೆರೆದ ಗ್ರಾಮಸ್ಥರು. ಕಳೆದ ಆರು ವರ್ಷಗಳಿಂದ ಹಿಂದೂ ಮುಸ್ಲಿಂ ಯುವಕರು ಸೇರಿ ಗಣೇಶನನ್ನು ಕೂರಿಸುತ್ತಿದ್ದೇವೆ.

ಹಿಂದೂಗಳು ಮುಸ್ಲಿಂರ ಹಬ್ಬಗಳಾದ ಉರುಸ್, ಇದ್ ಮಿಲಾದ್ ಸೇರಿದಂತೆ ಎಲ್ಲ ಹಬ್ಬಗಳನ್ನು ಆಚರಣೆ ಮಾಡ್ತಾರೆ.

ನಾವೆಲ್ಲರೂ ಏಕತೆ ಭಾವದಿಂದ ಬೇಧ-ಭಾವ ಮಾಡದೇ ಹಬ್ಬ ಆಚರಿಸ್ತೇವೆ. ನಾವೆಲ್ಲರೂ ಅಣ್ಣತಮ್ಮಂದಿರಂತೆ ಕೋಮು ಸೌಹಾರ್ದತೆಯಿಂದ ಹಿಂದೂ- ಇಸ್ಲಾಂ ಧರ್ಮದ ಹಬ್ಬವನ್ನು ಆಚರಣೆ ಮಾಡ್ತೇವೆ ಎಂದ ಮುಸ್ಲಿಂ ಬಾಂಧವ.