ಉ.ಕ ಸುದ್ದಿಜಾಲ ಕಾಗವಾಡ :

ಕಾಂಗ್ರೆಸ್ ಯುವ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ ನಡೆದುದ್ದು ಕೈಗೆ ಹಾಗೂ ಹೊಟ್ಟೆ ಭಾಗಕ್ಕೆ ಚೂರಿಯಿಂದ ಚುಚ್ಚಲಾಗಿದೆ.ಐನಾಪೂರ ಧನ್ಚಂತರಿ ಆಸ್ಪತ್ರೆ (ಮುತಾಲಿಕ ಆಸ್ಪತ್ರೆ)ಗೆ ದಾಖಲು ಮಾಡುದ್ದು ಯಾವುದೇ ಜೀವಕ್ಕೆ ಹಾನಿಯಾಗಿಲ್ಲ.

ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ನಿವಾಸಿ ಕಾಂಗ್ರೆಸ್ ಮುಖಂಡ ಪ್ರಶಾಂತ ಅಪರಾಜಗರ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ‌. ಬೈಕ‌ ಮೇಲೆ ಇಭ್ರು ಬಂದು ಮರಾಠಿ ಮಾತನಾಡುತ್ತಾ ನಿಂದು ಬಾಳ ಆಗೀದೆ, ಹೀಗೆ ಮುಂದು ವರೆದರೆ ಸರಿ ಇರಲ್ಲ ಅಂತ ಹೇಳಿ ಹಲ್ಲೆ ಮಾಡಿ  ದುಷ್ಕರ್ಮಿಗಳು ಪರಾರಿಯಾಗಿದ್ದರೆ.

ಪ್ರಶಾಂತನನ್ನ ದುಷ್ಕರ್ಮಿಗಳು ಅಡ್ಡಗಟ್ಟಿದ್ದು ಚಾಕು ಇರಿದು ಪರಾರಿಯಾಗಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಹಲ್ಲೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿದೆ. ಪ್ರಶಾಂತ ಅಪರಾಜಗೆ ಕಾಗವಾಡ ಸಾರ್ವಜನಿಕ ತಾಲ್ಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಐನಾಪೂರ ಧನ್ವಂತರಿ ಆಸ್ಲತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಶಾಂತಗೆ ಮೂರು ನಾಲ್ಕು ಬಾರಿ ಚೂರಿಯಿಂದ ಇರಿದ ದುಷ್ಕರ್ಮಿಗಳು. ಯಾವುದೇ ಗಂಭಿರ ಗಾಯವಾಗಿಲ್ಲ, ಹೊಟ್ಟೆ ಭಾಗದಲ್ಲಿ ಹಾಗೂ ಕೈಗೆ ಸ್ವಲ್ಪ ಗಾಯಗಳಾಗಿವೆ. ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.