ಉ.ಕ ಸುದ್ದಿಜಾಲ ಕಾಗವಾಡ :
ಕಳೆದ ಎರಡು ವರ್ಷಗಳಿಂದ ಕಾಗವಾಡ ತಾಲೂಕಿನ ಹಲವಾರು ಗ್ಎಅಮಗಳಲ್ಲಿ ಕಳ್ಳತನ ನಡೆದಿದ್ದು ಕಾಗವಾಡ ಹಾಗೂ ಅಥಣಿ ತಾಲೂಕಿನ ಜನ ಕಳ್ಳರ ಕಾಟಕಗಕೆ ಬೇಸತ್ತಿದ್ದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿ.ಕೆ ಗ್ರಾಮದಲ್ಲಿ ಕಳ್ಳತನ ಯತ್ನ ನಡೆಸಿದಾಗ ಕಳ್ಳತನ ಸದ್ದು ಕೇಳಿ ಬಂದಾಗ ಗ್ರಾಮಸ್ಥರು ಒಗ್ಗಟ್ಟಾಗಿ ಕಳ್ಳರನ್ನ ಹಿಡಿದು ಗೂಸಾ ಬೀಡಿದ್ದಾರೆ. ಬಳಿಕ ಕಾಗವಾಡ ಪೋಲಿಸರಿಗೆ ಕಳ್ಳರನ್ನ ಒಪ್ಪಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮನೆ, ದೇವಸ್ಥಾನ ಸೇರಿದಂತೆ ಕಳ್ಳತನ ನಡೆದಿದ್ದು ಕಳ್ಳತನದಿಂದ ಗಡಿ ಭಾಗದ ಜನರು ರೋಸಿ ಹೋಗಿದ್ದರು. ಕಾಗವಾಡ ತಾಲೂಕಿನ ಉಗಾರ ಬಿ.ಕೆ ಐನಾಪೂರ, ಕೆಂಪವಾಡ, ನವಲಿಹಾಳ ಕೃಷ್ಣಾ ಕಿತ್ತೂರ ಹಾಗೂ ಮೋಳೆ ಗ್ರಾಮ ಹೀಗೆ ಹಲವಾರು ಗ್ರಾಮಗಳಲ್ಲಿ ಕಳ್ಳತನ ನಡೆದಿದ್ದ ಹಲವು ಸರಣಿ ಕಳ್ಳತನ ಪ್ರಕರಣಗಳು.
ಘಟನೆಗೆ ಸಂಭಂದಿಸಿದಂತೆ ಮೂವರನ್ನು ವಶಕ್ಕೆ ಪಡೆದ ಕಾಗವಾಡ ಪೋಲಿಸರು. ವಿಚಾರಣೆ ನಡೆಸಿದ್ದು ಕಳೆದ ಎರಡು ವರ್ಷಗಳಮದ ನಟೆಯುತ್ತಿದ್ದ ಕಳ್ಳತನಕ್ಕೆ ಸದ್ಯ ಸಿಕ್ಕಿರುವ ಕಳ್ಳರು ಒಂದೇನಾ ಇಲ್ಲವೇ ಬೇರೆನಾ ಎಂದು ತನಿಖೆ ಬಳಿಕ ತಿಳಿಯಬೇಕಿದೆ.