ಉ.ಕ ಸುದ್ದಿಜಾಲ‌ ವಿಜಯಪುರ :

ವಿಜಯಪುರ ಚುನಾವಣೆಯಲ್ಲಿ ತಪ್ಪಿಯೂ ಸಾಬರಿ (ಮುಸ್ಲಿಂ)ಗೆ ಓಟು ಹಾಕಬೇಡಿ. ವಿಜಯಪುರದಲ್ಲಿ ಇನ್ಮುಂದೆ ಟಿಪ್ಪು ಸುಲ್ತಾನ್ ಗೆಲ್ಲೋದಿಲ್ಲ. ಟಿಪ್ಪು ಮೆರವಣಿಗೆ ಮಾಡುವ ನಾಲಾಯಕ ಹಿಂದೂಗಳು ನಮ್ಮ ದೇಶದಲ್ಲಿದ್ದಾರೆ ಎಂದು ಬಸವನಗೌಡ ಯತ್ನಾಳ ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ನಡೆದ ಶಿವಾಜಿ ಮಹಾರಾಜರ ಜನ್ಮದಿನ ಕಾರ್ಯಕ್ರಮದಲ್ಲಿ ಯತ್ನಾಳ ಮಾತನಾಡಿ ನಿರಾಣಿ ಹಾಗೂ ವಿಜಯೇಂದ್ರ ವಿರುದ್ಧವೂ ಯತ್ನಾಳ್ ಪರೋಕ್ಷ ವಾಗ್ದಾಳಿ. ನನ್ನ ಸೋಲಿಸಲು ಬಿಜಾಪುರಕ್ಕೆ ಬಹಳ ರೊಕ್ಕ ಬರೋದಿದೆ. ಬಸನಗೌಡನನ್ನ ಕೆಡವೋಕೆ 50 ಕೋಟಿ ಖರ್ಚು ಮಾಡ್ತಾರಂತೆ..

ನನ್ನ ಸೋಲಿಸೋಕೆ ಪಕ್ಕದ ಜಿಲ್ಲೆಯವ ಹಾಗೂ ಬೆಂಗಳೂರಲ್ಲಿ ಕುಳಿತವ ಒಬ್ಬ ರೆಡಿಯಾಗಿದ್ದಾರೆ. ಬರ್ಲಿ 50 ಕೋಟಿ. ಎಲ್ಲರಿಗೂ ಡಾಬಾಗಳಲ್ಲಿ ಫುಲ್ ಊಟ ಮಾಡಿ, ಹೊಸ ಹೊಸ ಬಟ್ಟೆ ತಗೊಳ್ಳಿ. 15 ದಿನ ಮಜಾ ಮಾಡಿ, ಓಟ್ ಮಾತ್ರ ನನಗೆ ಹಾಕಿ ಎಂದ ಯತ್ನಾಳ

ಶಿವಾಜಿ ಮಹಾರಾಜರು ಸಂಕಲ್ಪ ಈಡೇರಿಸಬೇಕಿದೆ. ದೇಶಕ್ಕೆ ಒಬ್ಬ ಒಳ್ಳೆಯ ಪ್ರಧಾನಿ ಸಿಕ್ಕಿದ್ದಾನೆ ಎಂದ ಯತ್ನಾಳ್. ಸಿದ್ದರಾಮಯ್ಯ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದ ಯತ್ನಾಳ ನಾನು ಹಿಂದೂ, ಆದ್ರೆ ಹಿಂದೂತ್ವದ ವಿರೋಧಿ ಎಂದ ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ವಾಗ್ದಾಳಿ..

ನಾನು ಅಪ್ಪಗ ಹುಟ್ಟಿದ್ದ ಖರೇ ಐತಿ, ಆದ್ರ ಗ್ಯಾರಂಟಿ ಇಲ್ಲ‌ ಎನ್ನುವ ಮೂಲಕ‌ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ. ನಾನು ಕುಂಕುಮ ಹಚ್ಚೊಲ್ಲ, ನಮಾಜ್ ಟೋಪಿ ಹಾಕೋಕೆ ರೆಡಿ.

ರೇಶ್ಮೆ ಪಟಕ‌ ಧರಿಸಲ್ಲ ಸಾಬರ ಧರಿಸು ಹಾಕ್ತೀನಿ ಎನ್ನುವಂತಿದ್ದಾರೆ. ಟಿಪ್ಪು ಮೆರವಣಿಗೆ ಮಾಡುವ ನಾಲಾಯಕ್ ಹಿಂದೂಗಳು ನಮ್ಮ ದೇಶದಲ್ಲಿದ್ದಾರೆ.