ಉಡುಪಿ :

ಈ ಗ್ಯಾರೇಜು ಹುಡುಗನಿಗೆ ಪುನೀತ್ ರಾಜಕುಮಾರ್ ಬಗ್ಗೆ ವಿಶೇಷ ಅಭಿಮಾನ. ನೋಡಲು ಪುನೀತ್ ರಾಜಕುಮಾರ್ ರೀತಿಯಲ್ಲೇ ಕಾಣುವ ಯುವಕ ಪುನೀತ್ ರೀತಿಯಲ್ಲೇ ಉಡುಗೆ-ತೊಡುಗೆ ತೊಟ್ಟುಕೊಳ್ಳುವ ಪ್ರವೀಣ್ ಟಿಕ್ ಟಾಕ್ ಅಪ್ಲಿಕೇಶನಿನ್ನಲ್ಲಿ ಪುನೀತ್ ರೀತಿಯಲ್ಲೇ ಮಿಮಿಕ್ರಿ ಮಾಡಿ ಫೇಮಸ್ ಆಗಿರುವ ಪ್ರವೀಣ್.

ಉಡಪಿ ಜಿಲ್ಲೆಯ ಕುಂದಾಪುರ ಪರಿಸರದಲ್ಲಿ ಜೂನಿಯರ್ ಪುನೀತ್ ರಾಜಕುಮಾರ್ ಎಂದೇ ಪ್ರಸಿದ್ಧರಾಗಿರುವ ಯುವಕ. ಪುನೀತ್ ರಾಜಕುಮಾರ್ ಅಕಾಲಿಕ ಸಾವಿನಿಂದ ತೀವ್ರವಾಗಿ ನೊಂದುಕೊಂಡಿರುವ ಪ್ರವೀಣ್ ಮೂಲತಃ ತೀರ್ಥಹಳ್ಳಿಯ ನಿವಾಸಿಯಾಗಿರುವ  ಪ್ರವೀಣ ಆಚಾರ್ಯ ಈಗ ಸಾಸ್ತಾನದಲ್ಲಿ ಗ್ಯಾರೇಜು ನಡೆಸುತ್ತಿದ್ದಾರೆ. ಇವರ ಜೊತೆ ಸೆಲ್ಫಿ ಕ್ಲಿಕ್ಕಿಸಿ ಕೊಳ್ಳಲು ರಾಶಿ ಬೀಳುತ್ತಿದ್ದರು ಅಪ್ಪು ಅಭಿಮಾನಿಗಳು.