ಬೆಳಗಾವಿ :
ಕುರಿಗಳು ಮೆಯ್ದು ತಮ್ಮ ಮನೆಗಳಿಗೆ ತೆರಳುವ ಸಂಧರ್ಭದಲ್ಲಿ ಅವಘಡ ಒಂದು ಸಂಭವಿಸಿದ್ದು ಸುಮಾರು 12 ಕುರಿಗಳ ಮೇಲೆ ಟಿಪ್ಪರ್ ಹಾಯ್ದಿರುವ ದಾರುಣ ಘಟನೆಯೊಂದು ಬೆಳಗಾವಿ ಜಿಲ್ಲೆಯ ಅಗಸಗಿ ಗ್ರಾಮದ ಬಳಿ ನಡೆದಿದೆ.
ಕಡೋಲಿ ಗ್ರಾಮದ ಕುರಿಗಳ ಮೇಲೆ ಸಮೀಪದ ಚಾಲಕನೊರ್ವ ಟಿಪ್ಪರ್ ಹಾಯ್ಸಿಕೊಂಡು ಹೋಗಿದ್ದಾನೆ. ಈ ವೇಳೆ 12 ಕುರಿಗಳು ಟಾಯರ್ ಕೇಳಗೆ ಸಿಲುಕಿ ವಿಲವಿಲಿ ಓದ್ದಾಡಿ ಪ್ರಾಣ ಬಿಟ್ಟಿವೆ. ಅತಿಯಾದ ವೇಗದಲ್ಲಿ ಬರುತ್ತಿದ್ದ ಟಿಪ್ಪರ್ ಚಾಲಕ ಬೀರಪ್ಪ ಭರಮಪ್ಪಾ ಶಾಪೂರಕರ ಎಂಬುವರಿಗೆ ಸೇರಿದ ಕುರಿಗಳ ಹಿಂಡಿನ ಮೇಲೆ ಅಪಘಾತ ನಡೆಸಿದ್ದಾನೆ.

ಈ ವೇಳೆ ಸುಮಾರು 12 ಕುರಿಗಳು ಸ್ಥಳದಲ್ಲೆ ಮೃತಪಟ್ಟಿದ್ದು, ಮಾಲಿಕ ಬೀರಪ್ಪಗೂ ಟಿಪ್ಪರ್ ಬಡಿದು ರಸ್ತೆ ಮೇಲಿಂದ ಹಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಇಷ್ಟಾದರೂ ವಾಪಸ್ ತಿರುಗಿ ನೋಡದೆ ಟಿಪ್ಪರನೊಂದಿಗೆ ಪರಾರಿಯಾಗಿದ್ದಾನೆ.
.