ಉ.ಕ ಸುದ್ದಿಜಾಲ ಬೈಲಹೊಂಗಲ :

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ದೇವಲಾಪೂರ ಗ್ರಾಮದಲ್ಲಿ ಆಚಾರ್ಯ ಜ್ಞಾನೇಶ್ವರ ಮುನಿ ಮಹಾರಾಜರ ದೀಕ್ಷೆ ಮತ್ತು ಯಮ ಸಲ್ಲೇಖನ ವೃತಧಾರಣೆ ಕಾರ್ಯಕ್ರಮ ನ.13ರಂದು ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ.

ವಿಮಲೇಶ್ವರ ಮುನಿ ಮಹಾರಾಜರು, ವಿಶುದ್ಧಮತಿ ಮಾತಾಜಿ, ನಾಂದಣಿಮಠದ ಸ್ವಸ್ತಿಶ್ರೀ ಜನಸೇನ ಭಟ್ಟಾರಕ ಪಟ್ಟಾಚಾರ್ಯರು ಸಾನಿಧ್ಯ ವಹಿಸುವರು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕ್ಷೇತ್ರದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.