ಉ.ಕ ಸುದ್ದಿಜಾಲ ಬೆಳಗಾವಿ :
ರಮೇಶ್ ಕತ್ತಿ ದಿಢೀರ್ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನ ಇಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನಾಮಪತ್ರ ಸಲ್ಲಿಕೆ ಅವಕಾಶ ಇದೆ.
ಅವಿರೋಧವಾಗಿ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆಗೆ ಕಸರತ್ತು ನಡೆದಿದೆ. ಈಗಾಗಲೇ ನಿರ್ದೇಶಕರ ಜೊತೆಗೆ ಎರಡ್ಮೂರು ಹಂತದ ಮಾತುಕತೆ ಕೂಡಾ ನಡೆದಿದೆ. ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ, ರಮೇಶ್ ಕತ್ತಿ ನೇತೃತ್ವದಲ್ಲಿ ಮಾತುಕತೆ ನಡೆಯಲಿದೆ.
ಅಣ್ಣಾಸಾಹೇಬ್ ಜೊಲ್ಲೆ, ಮಹಾಂತೇಶ ದೊಡ್ಡಗೌಡರ, ಪ್ರಭಾರಿ ಅಧ್ಯಕ್ಷ ಸುಭಾಷ ಡವಳೇಶ್ವರ ಮಧ್ಯೆ ಫೈಟ್ ನಡೆಯಲಿದೆ. ಅಣ್ಣಾಸಾಹೇಬ್ ಜೊಲ್ಲೆಗೆ ಕೆಲ ನಿರ್ದೇಶಕರ ವಿರೋಧ ಹಿನ್ನೆಲೆಯಲ್ಲಿ ಮೂಡದ ಒಮ್ಮತ.
ಪ್ರತ್ಯೇಕವಾಗಿ ನಿರ್ದೇಶಕರನ್ನು ಕರೆಯಿಸಿ ಅಧ್ಯಕ್ಷ ಯಾರಾಗಬೇಕೆಂದು ಅಭಿಪ್ರಾಯ ಸಂಗ್ರಹ. ಬಳಿಕ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿ ಬೆಳಗ್ಗೆ 11 ಕ್ಕೆ ಸುದ್ದಿಗೋಷ್ಠಿ ನಡೆಸಲಿರುವ ಸವದಿ, ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹೆಸರು ಘೋಷಣೆ ಮಾಡಲಿದ್ದಾರೆ.
ಕಣದಲ್ಲಿ ಅಭ್ಯರ್ಥಿಗಳಿದ್ದರೆ ಚುನಾವಣೆ, ಇಲ್ಲವಾದರೆ ಅವಿರೋಧ ಆಯ್ಕೆ ಘೋಷಣೆ ಉಳಿದ ಒಂದೇ ವರ್ಷಕ್ಕೆ ಅವಧಿಗೆ ಚುನಾವಣೆಯಿದ್ರೂ ತೀವ್ರ ಪೈಪೋಟಿ. ತೀವ್ರ ಪೈಪೋಟಿ ಇದ್ರೂ ಅಧ್ಯಕ್ಷರನ್ನ ಅವಿರೋಧವಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಮಂತ್ರಿ ಸ್ಥಾನಕ್ಕೆ ಸಮನಾಗಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿಯೇ ಅತಿದೊಡ್ಡ ಬ್ಯಾಂಕ್ ಎಂಬ ಖ್ಯಾತಿ 40ಲಕ್ಷಕ್ಕೂ ಅಧಿಕ ರೈತರ ಆರ್ಥಿಕತೆ ಮೇಲೆ ಬ್ಯಾಂಕ್ ನೇರ ಪರಿಣಾಮ ಹೀಗಾಗಿ ಹೊಸ ಅಧ್ಯಕ್ಷರ ಜವಾಬ್ದಾರಿ ಶಾಸಕ ಬಾಲಚಂದ್ರ ಜಾರಕೊಹೊಳಿ,ಲಕ್ಷ್ಮಣ ಸವದಿ, ರಮೇಶ ಕತ್ತಿ ಹೆಗಲಿಗೆ ಇದೆ.
ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಜಾರಕೊಹೊಳಿ ಬ್ರದರ್ಸ್, ಮಹಾಂತೇಶ ದೊಡಗೌಡರ ಪರವಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬ್ಯಾಟ ಬೀಸುತ್ತಿದ್ದಾರೆ. ಕೊನೆಗೆ ಯಾರಾಗುತ್ತಾರೆ ಡಿಸಿಸಿ ಬ್ಯಾಂಕ ಅಧ್ಯಕ್ಷ ಕಾಯ್ದು ನೋಡಬೇಕಿದೆ.