ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಗರ್ಭಿಣಿ ಮಹಿಳೆ ಸಾವು! ದುಡ್ಡು ಕಟ್ಟಿಲ್ಲ ಎಂದು ಆರು ತಿಂಗಳ ತುಂಬು ಗರ್ಭಿಣಿಗೆ ಚಿಕಿತ್ಸೆ ನೀಡದ ಆರೋಪ ಬೆಳಗಾವಿ ನಗರದ ಕಂಗ್ರಾಳ ಗಲ್ಲಿಯ ಗರ್ಭಿಣಿ ಆರತಿ ಅನಿಲ್ ಚವ್ಹಾಣ(30) ಸಾವು.
ಆರು ತಿಂಗಳ ಗರ್ಭಿಣಿಯನ್ನ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದ ಕುಟುಂಬಸ್ಥರು ಹೊಟ್ಟೆ ನೋವು ಬಂತು ಅಂತಾ ನಿನ್ನೆ ಬೆಳಿಗ್ಗೆ 08 ಗಂಟೆಗೆ ಆದರ್ಶ ಹಾಸ್ಪಿಟಲ್ ಗೆ ದಾಖಲು ಈ ವೇಳೆ ಮಧ್ಯಾಹ್ನ ಎರಡು ಗಂಟೆಗೆ ಹೊಟ್ಟೆಯಲ್ಲಿರುವ ಮಗು ಸಾವು ಆಗಿದೆ ಎಂದು ಹೇಳಿದ್ದ ಆಸ್ಪತ್ರೆ ವೈದ್ಯರು.
ಆಗ ಹೆಚ್ಚಿನ ಚಿಕಿತ್ಸೆ ನೀಡಬೇಕು 30ಸಾವಿರ ದುಡ್ಡು ಕಟ್ಟುವಂತೆ ಹೇಳಿದ್ದ ವೈದ್ಯರು 10 ಸಾವಿರ ರೂಪಾಯಿ ಹಣ ಕಟ್ಟಿ ಉಳಿದಿದ್ದನ್ನ ಆಮೇಲೆ ಕಟ್ಟುವುದಾಗಿ ಹೇಳಿದ್ದ ಆರತಿ ಕುಟುಂಬಸ್ಥರು ಆದರೆ, ಬಾಕಿ ಹಣ ತುಂಬಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಮಹಿಳೆಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರ ಆರೋಪ.
ನ್ಯಾಯ ಕೊಡಿಸುವಂತೆ ಖಡೇಬಜಾರ್ ಪೊಲೀಸ್ ಠಾಣೆ ಎದುರು ಕುಟುಂಬಸ್ಥರ ಕಣ್ಣೀರು ಆಸ್ಪತ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕುಟುಂಬಸ್ಥರು