ಮೋಳೆ :

ಪ್ರತಿಯೊಂದು ಕೆಲಸ ನಿರ್ವಹಣೆ ಜೊತೆಗೆ ಇತರ ವಿವಿಧ ಕಾಮಗಾರಿಗಳು ಆಗಬೇಕೆಂದರೆ ಕಾರ್ಮಿಕರು ಬೇಕೆ ಬೇಕು. ಕಾರ್ಮಿಕರು ಒಗ್ಗೂಡಿ ಕಾರ್ಮಿಕ ದಿನಾಚರಣೆ ದಿನದಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಕಾರ್ಮಿಕ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು. ದೇಶ ಸೇವೆ ಸಲ್ಲಿಸಿ ನಿವೃತಿ ಹೊಂದಿದ ಸೈನಿಕರಿಗೆ ಸನ್ಮಾನ ಮಾಡುವುದರ ಮೂಲಕ ಕಾರ್ಮಿಕ ದಿನಾಚರಣೆ ಆಚರಿಸಿದರು.

ಮೋಳೆ ಗ್ರಾಮದ ಶ್ರೀ ಸಿದ್ದೇಶ್ವರ ಕಟ್ಟಡ ನಿರ್ಮಾಣ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪರೀಕ್ಷೆಯಲ್ಲಿ ಹೆಚ್ಚಿದ ಅಂಕ ಪಡೆದ ಕಾರ್ಮಿಕ ಸಂಘದ ಸದಸ್ಯರು ಮಕ್ಕಳಿಗೆ ಸತ್ಕಾರ ಮಾಡಿ ಗೌರವಿಸಲಾಯಿತು. ನಿವೃತ ಕಾರ್ಮಿಕರಿಗೆ ಸತ್ಕಾರ, ಆಶಾ ಕಾರ್ಯಕರ್ತರಿಗೆ ಸತ್ಕಾರ ಮಾಡಲಾಯಿತು.

ಸತ್ಕಾರದ ಬಳಿಕ ಮೋಳೆ ಗ್ರಾ.ಪಂ ಅಧ್ಯಕ್ಷ ಬೂತಾಳಿ ಥರಥರೆ ಮಾತನಾಡಿ ಪ್ರತಿಯೊಬ್ಬ ಕಾರ್ಮಿಕನ ಶ್ರಮದಿಂದಾಗಿ ಇಂದು ನಾವೆಲ್ಲ ಈ ಆಶ್ರಯಗಳನ್ನ ಪಡೆಯುತ್ತಿದ್ದು. ಈ ಕಾರ್ಮಿಕ ಸಂಘಟನೆಯು ಹೀಗೆ ಗಟ್ಟಿಯಾಗಿ ಉಳಿಯಲಿ. ಮುಂದಿನ ದಿನಗಳಲ್ಲಿ ಗ್ರಾ.ಪಂ ವತಿಯಿಂದ ಕಾರ್ಮಿಕರಿಗೆ ವಿವಿಧ ಸೌಲಭ್ಯದ ಜೊತೆಗೆ ಕಟ್ಟಡ ಕಲ್ಯಾಣ ನಿಧಿಗೆ ಸಹಾಯ ಹಸ್ತ ನೀಡಲಾಗುವುದು ಎಂದು ಹೇಳಿದರು.

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರ ಅನುಪಸ್ಥಿತಿಯಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಸಚೀನ ದೇಸಾಯಿ ಪಾಲ್ಗೊಂಡು ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಕಾಗವಾಡದಲ್ಲಿ ಕಾರ್ಮಿಕ ಇಲಾಖೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಕಾಗವಾಡದಲ್ಲಿ ಎರಡು ಎಕರೆ ಜಾಗದಲ್ಲಿ ಕಾರ್ಮಿಕ ಭವನ ಕಟ್ಟಡ ಮಾಡಲು 50 ಲಕ್ಷ ಧನ ಸಹಾಯ ಮಾಡಲು ಶಾಸಕರು ಹೇಳಿದ್ದಾರೆ. ಅದರಂತೆ ಕಾರ್ಮಿಕರಿಗೆ ಪಿಂಚಣಿ ಜೊತೆಗೆ ಇತರ ತೊಂದರೆಯಾದಲ್ಲಿ ಶಾಸಕರನ್ನ ಸಂಪರ್ಕಿಸಿ ಎಂದು ಕಟ್ಟಡ ಕಾರ್ಮಿಕರನ್ನ ಉದ್ದೇಶಿಸಿ‌ ಮಾತನಾಡಿದರು.

ನಿವೃತ ಸೈನಿಕರಾರದ ಮಹಾವೀರ ಬೊರಗಾಂವೆ, ಸಿದರಾಯ ಹಳ್ಳೊಳ್ಳಿ, ರಾಜು ಕಾವೇರಿ, ಗಣಪತಿ ಮುಂಜೆ, ನಂದಕುಮಾರ ಕಾಂಬಳೆ, ದುಂಡಪ್ಪ ಕಡಕೋಳ, ರಮೇಶ ಪಾಟೀಲ ಹಾಗೂ ಪದ್ಮಾಕರ ಕಟ್ಟಿಕರ ಅವರಿಗೆ ಕಟ್ಟಡ ಕಾರ್ಮಿಕರ ಸಂಘದಿಂದ ಸತ್ಕರಿಸಲಾಯಿತು.

ಈ ಸಂಧರ್ಭದಲ್ಲಿ ಕಾಗವಾಡ ಶಾಸಕ ಶ್ರೀಂಮತ ಪಾಟೀಲ ಅವರ ಅನುಪಸ್ಥಿತಿಯಲ್ಲಿ ಶಾಸಕರ ಆಪ್ತಕಾರ್ಯದರ್ಶಿ ಸಚೀನ ದೇಸಾಯಿ ಮೋಳೆ ಗ್ರಾ.ಪಂ ಅಧ್ಯಕ್ಷ ಬೂತಾಳಿ ಥರಥರೆ, ಉಪಾಧ್ಯಕ್ಷೆ ಮನೀಷಾ ಮುಂಜೆ, ಅಥಣಿ ಕಾರ್ಮಿಕ ನಿರೀಕ್ಷಕ ಸಂಜು ಬೊಸಲೆ, ವಕೀಲರಾದ ಮಹಾದೇವ ಪಾರಗಾಂವೆ, ಶಿಕ್ಷಕರು ಮಾರ್ಗದರ್ಶಕರಾದ ಶಂಕರ ಮಿರ್ಜೆ ಕಾರ್ಮಿಕ ಸಂಘದ ಅಧ್ಯಕ್ಷ ಸಂತೋಷ ಮಿರ್ಜೆ, ಕಾರ್ಮಿಕ ಅಧಿಕಾರಿ ಬೀಮರಾವ ಬರಿಗಲ್ಲ ಹಾಗೂ ಮೊಳವಾಡ ಗ್ರಾ.ಪಂ ಉಪಾಧ್ಯಕ್ಷ ಅಮೀತ ಪಾಟೀಲ ಉಪಸ್ಥಿತರಿದ್ದರು. ಉದಯ ಬಾಳಿಕಾಯಿ ಹಾಗೂ ಶಂಕರ ಮಿರ್ಜೆ ಶಿಕ್ಷಕರು ಕಾರ್ಯಕ್ರಮವನ್ನ ನಿರೂಪಿಸಿದರು.