ಉ.ಕ ಸುದ್ದಿಜಾಲ ವಿಜಯಪೂರ :

ತಾನೊಂದು ಬಗೆದರೆ ದೈವ ಒಂದು ಬಗೆದಿತ್ತು ಅನ್ನುವ ಗಾದೆ ಮಾತಿನಂತೆ ಇಲ್ಲೊಬ್ಬ ಯುವಕ ಇಂಜಿನಿಯರಿಂಗ್ ಮುಗಿಸಿ ಯಾವುದೊ ಒಂದು ಕಂಪನಿಯಲ್ಲಿ ಕೈ ತುಂಬ ಕೆಲಸ ಮಾಡಿ ಆರಾಮಾಗಿ ಇರಬೇಕಾದ ಯುವಕ ಇಂದು ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಅನಕೂಲಕ್ಕಾಗಿ ಪುಸ್ತಕ ಒಂದನ್ನ ಬರೆಯುವುದರ ಮೂಲಕ ಇತರ ವಿದ್ಯಾರ್ಥಿಗಳ ಪಾಲಿಗೆ ಹೀರೊ ಆಗಿದ್ದಾರೆ.

ಹೌದು ಹೀಗೆ ವಿದ್ಯಾರ್ಥಿಗಳ ಪಾಲಿಗೆ ಹೀರೊ ಆಗಿರುವ ಈ ಶಿಕ್ಷಕರ ಹೆಸರು ದೀಪಕ‌ ಪಾಟೀಲ ಇವರು ಮೂಲತಃ ಬಿಜಾಪೂರ ಜಿಲ್ಲೆಯವರಾಗಿದ್ದು ಬಿಇ ಮೆಕ್ಯಾನಿಕಲ್ ಪದವಿದರರು. ಈ ಮೊದಲು ಬಿಜಾಪೂರದ ಖಾಸಗಿ ಕಾಲೇಜಿನಲ್ಲಿ 3 ವರ್ಷ ಉಪನ್ಯಾಸಕ ವೃತ್ತಿ ಮಾಡಿ ನಂತರ ಪಾರ್ ಟೈಮ್ ಆಗಿ ಸೆಂತ್ ಜೊಸೆಫ್ ಪಿಯು ಕಾಲೇಜ ಬಿಜಾಪೂರ, ಆರ್ ಕೆ ಎಂ ಎಸ್ ಪಿಯು ಕಾಲೇಜ ಬಿಜಾಪೂರ, ವಿಕಾಸ ಪಿಯು ಕಾಲೇಜ ವಿಜಯಪೂರ ಹಾಗೂ ಪೇಜ ಜೂನಿಯರ್ ಪಿಯು ಕಾಲೇಜ ಹೈದರಾಬಾದ್ ನಲ್ಲಿಯೂ ಸಹಿತ ಉಪನ್ಯಾಸ ವೃತ್ತಿ ಮಾಡಿದ್ದಾರೆ.

ಉಪನ್ಯಾಸಕ ದೀಪಕ‌ ಪಾಟೀಲ ನಡೆದು ಬಂದ ದಾರಿ

ಈಗ ಇವರಿಗೆ ಕೇವಲ 27 ವರ್ಷ ವಯಸ್ಸು ಚಿಕ್ಕ ವಯಸ್ಸಿನಲ್ಲಿಯೇ ಟಾರ್ಗೆಟ್ 100 ಬುಕ್ ಬರೆಯುವುದರ ಮೂಲಕ ಇತರ ವಿದ್ಯಾರ್ಥಿಗಳಿಗೆ ಅನಕೂಲ ಮಾಡಿದ್ದಾರೆ.  2016 ರಲ್ಲಿ ಅಂಬಿಷನ್ ಅಕಾಡೆಮಿ ಎಂಬ ಚಿಕ್ಕ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದರು ಮುಂದೆ 2020-21 ಸಾಲಿನಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದುಕೊಂಡು ಸದ್ಯ ಅಂಬಿಷನ್ ಗ್ರೂಪ್ ಆ ಇನ್ಸ್ಟ್ಯೂಷನ್ಸ್ ನ್ ಪ್ರಧಾನ್ ಕಾರ್ಯದರ್ಶಿ. ಇವರ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಬರುವ ಎಲ್ಲ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜುಗಳಲ್ಲಿ 21 ಜನರು ಸೇವೆ ಸಲ್ಲಿಸುತ್ತಿದ್ದು ಬಡ ಮಕ್ಕಳಿಗಾಗಿ ಉಚಿತ ಶಿಕ್ಷಣ ಕೂಡಾ ನೀಡುತ್ತಿದ್ದಾರೆ.

2019 ಸೆಪ್ಟೆಂಬರ್ ತಿಂಗಳಲ್ಲಿ ಟಾರ್ಗೆಟ್-100 ಎಂಬ ಫಿಸಿಕ್ಸ್ ಪುಸ್ತಕ  ಬರೆದು ವಿಧಾನ ಪರಿಷತ್ ಸದಸ್ಯರಾದ ಶ್ರೀ ಅರುಣ್ ಶಹಾಪುರ ಮತ್ತು ಹಲವಾರು ಗಣ್ಯರು ಉಪಸ್ಥಿತರಿದು ಪುಸ್ತಕ ಬಿಡುಗಡೆ ಗೊಳಿಸದರು. ರಾಜ್ಯಾದ್ಯಂತ 70 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ತಲಪುವಂತೆ ಮಾಡಿದ್ದು ಈ ಪುಸ್ತಕದಿಂದ ಹಲವಾರು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪಡೆಯುವಲ್ಲಿಲ ಅನಕೂಲವಾಗಿದ್ದು ಹಲವಾರು ವಿದ್ಯಾರ್ಥಿಗಳು ಇವರಿಗೆ ಧನ್ಯವಾದ ತಿಳಿಸಿದ್ದಾರೆ.

ಉಪನ್ಯಾಸಕ ದೀಪಕ‌ ಪಾಟೀಲರಿಗೆ ಧನ್ಯವಾದ ತಿಳಿಸಿದ ವಿದ್ಯಾರ್ಥಿಗಳು