ಉ.ಕ ಸುದ್ದಿಜಾಲ ಅಥಣಿ :

ಕೊರಳಲ್ಲಿ ಜೀವಂತ ನಾಗರ ಹಾವು ಧರಿಸಿ ನಾಟಕಕ್ಕೆ ಬಂದ ಕಲಾವಿದ ಶಿವನ ಪಾತ್ರ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದಿದೆ.

ವೈರಲ್ ವಿಡಿಯೋ

ಇಂಚಗೇರಿ ಮಠದ ಸಪ್ತಾಹ ಹಿನ್ನೆಲೆ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನವಾಗ್ತಿತ್ತು. ಈ ವೇಳೆ ನಿಜವಾದ ನಾಗರಹಾವು ಹಿಡಿದ ಕೊರಳಲ್ಲಿ ಹಾಕಿಕೊಂಡು ಬಂದ ಶಿವನ ಪಾತ್ರಧಾರಿ ಚರಂತಯ್ಯ ಕಾಜಿಬೀಳಗಿ. ಕಳೆದ 30 ವರ್ಷಗಳಿಂದ ಬಸವೇಶ್ವರ ನಾಟಕದಲ್ಲಿ ಶಿವನ ಪಾತ್ರ ಮಾಡ್ತಿರುವ ಚರಂತಯ್ಯ. ನಿಜವಾದ ಹಾವು ಧರಿಸಿ ಬಂದ ಪಾತ್ರಧಾರಿಯನ್ನ ಕಂಡು ಶಾಕ್ ಆದ ಹೊಸ ಕಲಾವಿದರು..

ಹಾವಿಗೆ ಹೆದರದೆ ಸಮರ್ಥವಾಗಿ ಶಿವನ ಪಾತ್ರ ನಿರ್ವಹಿಸಿದ ಚರಂತಯ್ಯ. ಪಾತ್ರ ನಿರ್ವಹಣೆ ವೇಳೆ ಮೈಮೇಲಲ್ಲಾ ಓಡಾಡಿದ ನಾಗರಾಜ..