ಉ.ಕ ಸುದ್ದಿಜಾಲ ಅಥಣಿ :
ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್‌ಗಾಗಿ ಬಾರಿ ಪೈಪೋಟಿ ನಡೆಯುತ್ತಿದ್ದು ಈಗಾಗಲೇ ನಾಲ್ಕು ಜನ ಬಾರು ಪೈಪೋಟಿ ನಡೆದಿದ್ದು ಈಗ ಸನ್ಯಾಸಿಯೊಬ್ಬರು ಅಥಣಿ ಮತಕ್ಷೇತ್ರದಿಂದ ಕಾಂಗ್ರೆಸ್‌ದಿಂದ ಟಿಕೇಟ್ ನೀಡುವಂತೆ ಶಶಿಕಾಂತ ಪಡಸಲಗಿ ಮನವಿ ಮಾಡಿದ್ದಾರೆ.
ಅಥಣಿ ಮತ ಕ್ಷೇತ್ರದಲ್ಲಿ ಹೆಚ್ಚುತ್ತಿದೆ ಕೈ ಟಿಕೆಟ್ ಆಕಾಂಕ್ಷಿ ಸಂಖ್ಯೆ ಅಥಣಿ ಮತ ಕ್ಷೇತ್ರದಿಂದ ಚುನಾವಣೆ ಕಣಕ್ಕಿಳಿಯಲು ಸನ್ಯಾಸಿ ಸಿದ್ಧತೆ ನಡೆಸಿದ್ದಾರೆ. ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ನೀಡುವಂತೆ ಶಶಿಕಾಂತ ಪಡಸಲಗಿ ಮನವಿ ಮಾಡಿದ್ದು, ಇಂಚಗೇರಿ ಸಾಂಪ್ರದಾಯಿಕ ಗುರುಗಳು ಶಶಿಕಾಂತ ಪಡಸಲಗಿ ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ನಾನು ಅಥಣಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಜೊತೆ ಮಾತನಾಡಿದ್ದೇನೆ ನನಗೆ ಟಿಕೇಟ್ ನೀಡವಂತೆ ಮನವಿ ಮಾಡಿದ್ದೇನೆ. ಟಿಕೇಟ್ ಸಿಗಲಿ ಬಿಡಲಿ ಚುನಾವಣೆ ಅಖಾಡದಿಂದ ಹಿಂದೆ ಸರಿಯಲ್ಲ. ಸನ್ಯಾಸಿ ಬೆನ್ನಿಗೆ ಕ್ಷೇತ್ರದ ಜನ ನಿಂತಿದ್ದಾರೆ ಅವರ ಬೆಂಬಲದಿಂದ ಸ್ಪರ್ಧೆಗೆ ತೀರ್ಮಾನ ಮಾಡಿದ್ದೇನೆ.
ಅಥಣಿ ವಿಧಾನಸಭೆ ಕ್ಷೇತ್ರದಲ್ಲಿ ಈಗಾಗಲೇ ಪ್ರಬಲ ನಾಲ್ಕು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಗಜಾನನ ಮಂಗಸೂಳಿ, ಧರೆಪ್ಪ ಠಕ್ಕಣ್ಣವರ, ಸದಾಶಿವ ಬುಟಾಳಿ, ಬಸವರಾಜ್ ಬಿಸನಕೊಪ್ಪ. ಇವರ ನಡುವೆ ಶಶಿಕಾಂತ ಪಡಸಲಗಿ ಕೈ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಅಥಣಿ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು ಐದು ಜನ ಟಿಕೆಟ್ ಆಕಾಂಕ್ಷಿ ಸಂಖ್ಯೆ ಇದರಲ್ಲಿ ಯಾರಿಗೆ ಕಾಂಗ್ರೆಸ್ ಟಿಕೇಟ್ ನೀಡುತ್ತೆ ಕಾಯ್ದು ನೋಡ ಬೇಕಿದೆ.