ಉ.ಕ ಸುದ್ದಿಜಾಲ ಬೆಳಗಾವಿ :

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಮೇಲೆ ಫೈರಿಂಗ್ ಪೊಲೀಸ್ ಇಲಾಖೆ ಪಾರದರ್ಶಕ ತನಿಖೆ ಮಾಡುತ್ತಿಲ್ಲ ಬೆಳಗಾವಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ. ಡಿ.7 ರಂದು ಶ್ರೀರಾಮ್ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಮೇಲೆ ಫೈರಿಂಗ್ ಆಗಿದೆ.

ಕೂದಲೆಳೆ ಅಂತರದಲ್ಲಿ ರವಿ ಕೋಕಿತಕರ್ ಬಚಾವ್ ಆದ್ರು. ಫೈರಿಂಗ್ ನಂತರ ವಯಕ್ತಿಕ ದ್ವೇಷ ಎಂದು ಕಮಿಷನರ್ ಹೇಳಿದ್ದಾರೆ. ಮೇಲ್ನೋಟಕ್ಕೆ ವಯಕ್ತಿಕ ಅನಿಸಿದ್ರು ಇದರ ಹಿಂದೆ ರಾಜಕೀಯ ಪ್ರಭಾವ ಇದೆ ಎಂದು ಆರೋಪ. ರಾಜಕೀಯ ಒತ್ತಡಕ್ಕೆ ಪೊಲೀಸ್ ಇಲಾಖೆ ಮಣಿಯುತ್ತಿದೆ. ಕೊಲೆ ಪ್ರಕರಣದ ಹೈವಿಕ್ನೆಸ್ಸ್ ಗಳ ಹೇಳಿಕೆಯನ್ನು ಇನ್ನೂ ಪಡೆದಿಲ್ಲ.

ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಅಂಗಡಿ ಮಾಲೀಕರ ಹೇಳಿಕೆ ಪಡೆದಿಲ್ಲ. ಮೂರು ಜನರ ಹೇಳಿಕೆ ತಗೆದುಕೊಂಡಿಲ್ಲ, ಫೈರಿಂಗ್ ಅಕ್ಕ ಪಕ್ಕದ ಯಾರದ್ದು ಹೇಳಿಕೆ ತಗೆದು ಕೊಂಡಿಲ್ಲ. ಸಿಸಿ ಕ್ಯಾಮರಾದಲ್ಲಿ ಎರೆಡು ವಾಹನ ಕಾಣಿಸಿದೆ. ಆದ್ರೆ ಸ್ಕೂಟರ್ ಮಾತ್ರ ಸಿಜ್ ಮಾಡಿದ್ದಾರೆ ಇನ್ನೊಂದು ಬೈಕ್ ಸೀಜ್ ಮಾಡಿಲ್ಲ.

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಮೇಲೆ ಫೈರಿಂಗ್ ಪೊಲೀಸ್ ಇಲಾಖೆ ಪಾರದರ್ಶಕ ತನಿಖೆ ಮಾಡುತ್ತಿಲ್ಲ : ಪ್ರಮೋದ ಮುತಾಲಿಕ ಆರೋಪ

ಇವರ ಹಿಂದೆ ದೊಡ್ಡ ಗ್ಯಾಂಗ್ ಇದೆ ಅವರು ಹಿಂದೂ ವಿರೋಧಿ ಕುತಂತ್ರ ಮಾಡುತ್ತಿದ್ದಾರೆ. 2 ಬಾರಿ ಫೈರ್ ಆಗಿದೆ ಆದ್ರೂ ಸರಿಯಾಗಿ ತನಿಖೆ ಮಾಡಿಲ್ಲ. 2 ಬಾರಿ ಫೈರಿಂಗ್ ಬಗ್ಗೆ ಡ್ರೈವರ್ ಹೇಳಿಕೆ ನೀಡಿದ್ರು ಪೊಲೀಸ್ರು ಯಾವುದೇ ವಿಚಾರ ಮಾಡಿಲ್ಲ.
ಫೈರಿಂಗ್ ನಡೆದ ಹತ್ತು ದಿನಗಳ ನಂತರ ನಮ್ಮ ಕಾರ್ಯಕರ್ತರಿಗೆ ಇನ್ನೊಂದು ಬುಲೆಟ್ ಸಿಕ್ಕಿದೆ.

ರವಿ ಸೀಜ್ ಮಾಡಿದ ಕಾರಿನಲ್ಲಿ ನೋಡಿದಾಗ ಎರಡನೇ ಬುಲೆಟ್ ಸಿಕ್ಕಿದೆ. ಪೊಲೀಸ್ ಠಾಣೆಯ ಮುಂದೆ ನಿಂತಿರುವ ಅದೇ ಕಾರಲ್ಲಿ. ಎಷ್ಟರಮಟ್ಟಿಗೆ ಎಸ್ ಎಫ್ ಎಲ್ ತನಿಖೆ ಮಾಡಿದೆ ಇದರ ಮೇಲೆ ಗೊತ್ತಾಗುತ್ತೆ. ಇಷ್ಟಾದರು Sfl ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೆಲ್ಲವನ್ನೂ ಮುಚ್ಚಿ ಹಾಕುವ ಹುನ್ನಾರ ಮಾಡುತ್ತಿದ್ದಾರೆ.

ಆರ್ಮಸ್ ಆಕ್ಟ್ ಪ್ರಕಾರ 27 ಆಕ್ಟ್ ಹಾಕಬೇಕಿತ್ತು ಆದ್ರೆ 25 ಆಕ್ಟ್ ಹಾಕಿದ್ದಾರೆ. ಪೊಲೀಸ್ ಇಲಾಖೆ ಇದೆಂತ ಲೋಪ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಕೂಡ ಗಂಭೀರವಾಗಿ ಪಾರದರ್ಶಕ ತನಿಖೆ ಆಗಬೇಕು ಹೇಳಿಕೆ ಎಂದು ಹೇಳಿದರು.
ಅವರ ಮಾತನ್ನು ತಳ್ಳಿ ಹಾಕಿದ್ದಾರೆ ಅಂದ್ರೆ ಇದರ ಹಿಂದೆ ದೊಡ್ಡ ರಾಜಕೀಯ ತಂತ್ರ ಇದೆ.

ಬೆಳಗಾವಿ ಪೊಲೀಸ ಅಧಿಕಾರಿಗಳ ಮೇಲೆ ವಿಶ್ವಾಸ ಇಲ್ಲ ಇದನ್ನು ಸಿಐಡಿ ಇದನ್ನು ಕೊಡಬೇಕು ಎಂದು ಆಗ್ರಹ. ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ ಪ್ರಮೋದ್ ಮುತಾಲಿಕ್. ಸರ್ಕಾರಕ್ಕೆ ಸವಾಲ್ ಹಾಕಿದ ಮುತಾಲಿಕ್. ಸರ್ಕಾರಕ್ಕೆ ಇದು ಆಗಲ್ಲ ಎಂದು ಹೇಳಿದ್ರೆ ನಾನು 24 ಗಂಟೆಯಲ್ಲೇ ಒದ್ದು ತರುತ್ತೇನೆ ಎಂದು ಸವಾಲ್.

ಆರೋಪಿಗಳನ್ನು ಕಂಡು ಹಿಡಿಯುತ್ತೇನೆ ಎಂದು ಸರ್ಕಾರಕ್ಕೆ ಸವಾಲ್. ಮೋಬೈಲ್ ಸೀಜ್ ಮಾಡಿದ್ರೆ ಎಲ್ಲ ಗೊತ್ತಾಗುತ್ತೆ ಎಲ್ಲ ಗೊತ್ತಿದ್ದೂ ಪೊಲೀಸ್ರು ಸುಮ್ಮನಿದ್ದಾರೆ. ರಾಜಕಾರಣ ಕುಂತಂತ್ರ ಇದೆ ಇದರಲ್ಲಿ ಎಂದು ಆರೋಪ. ಇದನ್ನು ಪೊಲೀಸ್ ಇಲಾಖೆಯೆ ಹೊರ ತಗೆಯಬೇಕು ಆಗ್ರಹ.

ಎರೆಡು ದಿನದಲ್ಲಿ ಗೃಹ ಸಚಿವರ ಹತ್ರ ಹೋಗುತ್ತಿದ್ದೇನೆ. ಈ ಕುರಿತು ಆದಷ್ಟು ಬೇಗ ಒಂದು ತಿಂಗಳ ಒಳಗೆ ಇದರ ತನಿಖೆ ಆಗಬೇಕು. ನಿಮಗೆ ಗೊತ್ತಿದ್ರೆ ನೀವೇ ಹೇಳಿ ಎಂದು ಪ್ರಶ್ನೆ. ಪೊಲೀಸ್ ಇಲಾಖೆಗೂ ಇದು ಗೊತ್ತಿದೆ ಅವರೇ ಇದನ್ನು ಹೊರ ತೆಗೆಯಬೇಕು. ನಾನು ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ.

ಅವರ ಹತ್ರ ಎಲ್ಲವೂ ಇವೆ ಪೊಲೀಸ್ ಇದನ್ನು ಸರಿಯಾಗಿ ತನಿಖೆ ಮಾಡ್ಲಿ. ಸಿಐಡಿ ಇಲ್ಲ, ಎಸ್ ಐ ಟಿ ರಚನೆ ಮಾಡಬೇಕು ಎಂದು ನಮ್ಮ ಆಗ್ರಹ. ಒಂದು ತಿಂಗಳು ಗಡುವು ಕೊಡ್ತಿವಿ, ಇಲ್ಲವೇ ಮುಂದೆ ಉಗ್ರ ಹೋರಾಟ ಮಾಡುತ್ತೇವೆ.