ಉ.ಕ ಸುದ್ದಿಜಾಲ ಕಾಗವಾಡ :

ನಾನು ನಿಪ್ಪಾಣಿಗೆ ಬರದೇ ಇರಲು ಕಾರಣ ನಂಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇತ್ತು, ಕೊಣ್ಣೂರಿನಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮ ಇದ್ದಿದ್ದರಿಂದ ನಾನು ಅಲ್ಲಿಗೆ ಹೋಗಿದ್ದೆ ಎಂದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ.

ಬೆಳಗಾವಿ‌ ಜಿಲ್ಲೆಯ ಕಾಗವಾಡ ತಾಲಯುಕಿನ ಐನಾಪೂರ ಪಟ್ಟಣದಲ್ಲಿ ಆಯೋಜಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೂ ಮುನ್ನ ಮಾತನಾಡಿದ ಅವರು, ನಿಪ್ಪಾಣಿಯಲ್ಲಿ ತಮ್ಮ‌ ಬೆಂಬಲಿಗ ಉತ್ತಮ್ ಪಾಟೀಲ್ ಸ್ಪರ್ಧೆಯ ವಿಚಾರ, ನನ್ನ ವಯಕ್ತಿಕ ಅಭಿಪ್ರಾಯ ಪಕ್ಷದಲ್ಲಿ ‌ನಡೆಯೊಲ್ಲ ಅದು ಮನೆಯಲ್ಲಿ ನಡೆಯುತ್ತೆ.

ಪಕ್ಷದ ವೇದಿಕೆಯ ಅಂತ ಬಂದಾಗ ನಾವೆಲ್ಲರೂ ಒಂದೇ ಪಕ್ಷ ಹೇಳಿದ ಹಾಗೆ ಕೆಲಸ ಮಾಡುತ್ತೆವೆ, ನಾನು ಕಳೆದ ಬಾರಿ ಕಾಂಗ್ರೇಸ್ ನಲ್ಲಿದ್ದೆ, ಆಗ ಉತ್ತಮ್ ಪಾಟೀಲ್ ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿಯಾಗಿದ್ದ, ಅವನನ್ನು ಹಿಂದೆ ಸರಿಸಿ ಕಾಕಾಸಾಹೇಬ್ ಪಾಟೀಲ್ ಗೆ ಕಾಂಪ್ರಮೈಸ್ ಮಾಡಿ ಕಾಕಾಸಾಹೇಬ ಗೆ ಟಿಕೇಟ್ ಕೊಡಿಸಿದ್ದೆ.

ಉತ್ತಮ್ ಪಾಟೀಲ್ ರನ್ನು ನಾನೇ ಹಿಂದೆ ಸರಿಸಿದ್ದೆ, ನಾನು ಬಿಜೆಪಿಗೆ ಬರುತ್ತೆನೆ ಅಂತ ನನಗೆ ಗೊತ್ತಿರಲಿಲ್ಲ, ಉತ್ತಮ್ ಪಾಟೀಲ್ ಗೂ ನನಗೂ ಉತ್ತಮ ಸಂಬಂಧ ಇದೆ, ಪಕ್ಷ ಅಂತ ಬಂದಾಗ ನಾನೂ ಸಹ ಶಶಿಕಲಾ‌ ಜೊಲ್ಲೆ ಪರವಾಗಿ ನಿಲ್ಲುತ್ತೆನೆ ಎಂದ ರಮೇಶ್ ಜಾರಕಿಹೊಳಿ.