ಉ.ಕ ಸುದ್ದಿಜಾಲ ಗೋಕಾಕ :

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೇ ಬಾರಿ ಚುನಾವಣೆಗೆ ನಿಲ್ಲುತ್ತಿರಲಿಲ್ಲ, ಆ ಮಹಾನಾಯಕನಿಗೆ ಚಾಲೆಂಜ್ ಮಾಡಲಿಕ್ಕೆ ನಾನು ಚುನಾವಣೆ ನಿಲ್ಲುತಿದ್ದೇನೆ.

ಅವನನ್ನು ಮೂಲೆಗೆ ಹಚ್ಚುವ ಸಲುವಾಗಿ ಚುನಾವಣೆ ನಿಲ್ಲುತಿದ್ದೇನೆ  ನನ್ನ ಮೇಲೆ ಷಡ್ಯಂತ್ರ ಮಾಡಿ ಒಂದು ಷಂಡನಂತೆ ರಾಜಕೀಯ ಮಾಡಿದ್ದಾನೆ. ಅವನನ್ನು ಪೂರ್ಣ ಪ್ರಮಾಣ ಮನೆಗೆ ಹಚ್ಚುವ ತನಕ ರಾಜಕೀಯದಿಂದ ನಿವೃತ್ತಿ ಆಗೋದಿಲ್ಲ.

ಏನೆ ತ್ಯಾಗ ಮಾಡಿಯಾದರೂ 2023 ಕ್ಕೆ ಮತ್ತೆ ಬಿಜೆಪಿ ಮುಖ್ಯಮಂತ್ರಿ ಮಾಡ್ತೀನಿ ಎಂದು ರಮೇಶ ಜಾರಕಿಹೋಳಿ ಶಪಥ ಮಾಡಿದ್ದಾರೆ.

ರಾಜಕೀಯ ನಿವೃತ್ತಿ ಬಗ್ಗೆ ರಮೇಶ ಜಾರಕಿಹೊಳಿ ಹೇಳಿದ್ದೇನು

ನಾನು 6 ಬಾರಿ ಶಾಸಕನಾಗಿ ಈಗ 7 ನೇ ಬಾರಿ ಶಾಸಕನಾಗಿದ್ದೇನೆ 8 ನೇ ಬಾರಿ ಶಾಸಕನಾಗುವ ನಿರ್ಧಾರ ನಿಮ್ಮ ಮೇಲೆ ಬಿಟ್ಟಿದ್ದೇನೆ. ಮುಂದಿನ ಬಾರಿ ಶಾಸಕನಾದ ಮೇಲೆ ರಾಜಕೀಯದಿಂದ ನಿವೃತ್ತಿ ಆಗಬೇಕೆಂದಿದ್ದೇನೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಹೇಳಿದ್ದಾರೆ.